ಬಂಟ್ವಾಳ:  ಪ್ರಧಾನ ಮಂತ್ರಿ  ನರೇಂದ್ರ ಮೋದಿಯವರ 12 ವರ್ಷಗಳ ವಿಶ್ವಾಸ, ವಿಕಾಸ ಮತ್ತು ಜನ ಕಲ್ಯಾಣದ ಪ್ರಯುಕ್ತ ಬಿಜೆಪಿ ಬಂಟ್ವಾಳ ಮಂಡಲದಲ್ಲಿ ಕೈಗೊಂಡಿರುವ ವಿಶೇಷ ಜನಸಂಪರ್ಕ ಅಭಿಯಾನದ ಅಂಗವಾಗಿ ಮಂಗಳವಾರ ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಶಾಸಕ ರಾಜೇಶ್ ನಾಯ್ಕ್ ಅವರು ಬಿಜೆಪಿ ಬಂಟ್ವಾಳ ಕ್ಷೇತ್ರದ ವಿವಿದೆಡೆ ಹಿರಿಯ ಕಾರ್ಯಕರ್ತರನ್ನು ಭೇಟಿಯಾಗಿ  ಅವರ ಯೋಗಕ್ಷೇಮ ವಿಚಾರಿಸಿ ಗೌರವಿಸಿದರು.

 


ಮೂಡುಪಡುಕೋಡಿಯ ಬೂಬ ಸಪಲ್ಯ  ವಿಶ್ವನಾಥ್ ಗೌಡ ರಾಯಿ,ಕರುಣೇಂದ್ರ ಪೂಜಾರಿ ಕೊಂಬ್ರಬೈಲು, ಭಾಸ್ಕರ ಅಜೆಕಲ, ಶಾಂತವೀರ ಪೂಜಾರಿ ನಾವೂರ ಹಾಗೂ ದಾಮೋದರ್ ನಾಯಕ್ ಉಳಿ ಅವರ ಮನೆಗೆ ಭೇಟಿ ನೀಡಿದ ಸಂಸದರು ಹಾಗೂ ಶಾಸಕರು ಅವರ ಯೋಗಕ್ಷೇಮವನ್ನು ವಿಚಾರಿಸಿದರಲ್ಲದೆ ಅವರನ್ನು ಪಕ್ಷದ ವತಿಯಿಂದ ಗೌರವಿಸಲಾಯಿತು.

ಬಳಿಕಕಕ್ಯಬೀಡು ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಿ ದೇವಸ್ಥಾನಕ್ಕೆ  ಭೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸಿದರು.
ತದನಂತರ ಬಿ.ಸಿ.ರೋಡಿನ  ಪುರಸಭಾ ಮಾಜಿ ಸದಸ್ಯ ಗೋಪಾಲ ಸುವರ್ಣ, ಅಜ್ಜಿಬೆಟ್ಟು ನಿವಾಸಿ  ಹಿರಿಯ ಕಾರ್ಯಕರ್ತರಾದ ಪ್ರಮೋದ್ ಕುಮಾರ್ , ರಮೇಶ್ ಪೂಜಾರಿ, ಪ್ರಭಾಕರ ಬೋಳಂಗಡಿ,ಶಿವಾನಂದ ಬರಿಮಾರು, ನಾರಾಯಣ ಗೌಡ ಏಮಾಜೆ ,ಪಿ.ಜಿ.ಕೇಶವ ಭಟ್ ಕರೋಪಾಡಿ,ಪಿ.ಲಿಂಗಪ್ಪ ಕನ್ಯಾನ ಅವರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ಗೌರವ ಸಲ್ಲಿಸಿದರು.


ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಹಿರಿಯರ ಸೂಚನೆಯಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹಾಗೂ ಕಾರ್ಯಕರ್ತರ ಜೊತೆ ಹಿರಿಯ ಬಿಜೆಪಿ ಕಾರ್ಯಕರ್ತರ ಮನೆಗೆ ಬೇಟಿ ನೀಡಿ ಗೌರವಿಸುವ ಕಾರ್ಯ ಮಾಡಿದ್ದೇನೆ‌ ಮತ್ತು ಜಿಲ್ಲೆಯ ಸಂಸದನಾಗಿ ಈ ಕಾರ್ಯ ಮಾಡಲು ನನ್ನ ಪಾಲಿಗೆ ಬಂದ ಸುಯೋಗ ಎಂದು ಭಾವಿಸಿದ್ದು, ನಿಷ್ಠಾವಂತ ಕಾರ್ಯಕರ್ತರ ಶ್ರಮದ ಫಲವಾಗಿ ಪಕ್ಷ ಸಂಘಟನಾತ್ಮಕವಾಗಿ ಬೆಳೆದಿದೆ ಮತ್ತು ಬಹುತೇಕ ಎಲ್ಲಾ ಕಡೆಗಳಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದರು.
ಕೇಂದ್ರ ಸರಕಾರದ ಯೋಜನೆಗಳನ್ನು ರಾಜ್ಯದಲ್ಲಿ ಕಾರ್ಯರೂಪಕ್ಕೆ ತರುವಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ರಾಜಕಾರಣ ಮಾಡುತ್ತಿದೆ ಎಂದು  ಆರೋಪಿಸಿದ ಅವರು
ದ.ಕ.ಜಿಲ್ಲೆಯ ಅಭಿವೃದ್ಧಿಗೆ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವುದು
ಹಾಗೂ ಬಂಟ್ವಾಳದಲ್ಲಿಯು ಬಿಜೆಪಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ನಮ್ಮ ನಮ್ಮ ಬೂತ್ ಗಳಲ್ಲಿ ಯುವ ಪೀಳಿಗೆಯನ್ನು ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು.
ಬಂಟ್ವಾಳ ಶಾಸಕ‌ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ಮುಂದಿನ ದಿನಗಳು ಚುನಾವಣಾ ವರ್ಷಗಳಾಗಿದ್ದು, ಕಾರ್ಯಕರ್ತರು ಪಕ್ಷ ಸಂಘಟನೆಯ ಜವಾಬ್ದಾರಿಯ ಜೊತೆಗೆ ಗ್ರಾಮದ ಪ್ರತಿಯೊಂದು ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಸ್‌ಐಆರ್ ಬಗ್ಗೆ ವಿಶೇಷ ಆಸಕ್ತಿ ವಹಿಸುವಂತೆ ಕರೆ ನೀಡಿದರು.
ಸಂಸದರ‌ ಭೇಟಿಯ ವೇಳೆ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಿಜೆಪಿ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್ ಶೆಟ್ಟಿ,  ದೇವಪ್ಪ ಪೂಜಾರಿ, ಸುದರ್ಶನ ಬಜ, ಬಿಜೆಪಿ ವಕ್ತಾರ ಮಾದವ ಮಾವೆ,ಪಕ್ಷದ ಪ್ರಮುಖರಾದ ಸುಲೋಚನ ಜಿ.ಕೆ.ಭಟ್, ಹರಿಕೃಷ್ಣ ಬಂಟ್ವಾಳ, ಸಂದೇಶ್ ಶೆಟ್ಟಿ ಅರೆಬೆಟ್ಟು, ರಾಮ್ ದಾಸ ಬಂಟ್ವಾಳ, ದೇವದಾಸ್ ಶೆಟ್ಟಿ, ದಿನೇಶ್ ಅಮ್ಟೂರು, ‌ಪುಷ್ಪರಾಜ್ ಚೌಟ, ಅಭಿಷೇಕ್ ರೈ, ಯಶೋಧರ ಕರ್ಬೆಟ್ಟು, ಸಂಪತ್ ಕುಮಾರ್, ದಿನೇಶ್ ಶೆಟ್ಟಿ ದಂಬೆದಾರ್, ರತ್ನಾಕರ್ ಚೌಟ,ಕಮಲಾಕ್ಷಿ ಕೆ.ಪೂಜಾರಿ, ಹರ್ಷಿಣಿ ಪುಷ್ಪಾನಂದ, ಲಖಿತಾ ಆರ್ ಶೆಟ್ಟಿ, ಸಂಜೀವ ಪೂಜಾರಿ ಪಿಲಿಂಗಾಲು, ಪ್ರಣಾಮ್ ರಾಜ್,ತನಿಯಪ್ದ ಗೌಡ,ಹರೀಶ್ ರೈ ಪೆರಾಜೆ, ಸನತ್ ಕುಮಾರ್ ರೈ, ನಾಗೇಶ್ ಭಂಡಾರಿ, ಅಶೋಕ್ ರೈ ನೇರಳಕಟ್ಟೆ, ಸುರೇಶ್ ಟೈಲರ್, ಭಾಸ್ಕರ ಟೈಲರ್, ಹರಿಪ್ರಸಾದ್ , ಜನಾರ್ದನ ಬೊಂಡಾಲ,ಹರೀಶ್ ಶೆಟ್ಟಿ ಪಡು, ಸುರೇಶ್ ಕುಲಾಲ್, ಸದಾನಂದ ನಾವೂರ, ಚಿದಾನಂದ ರೈ ಕಕ್ಯ, ಸುರೇಶ್ ಮೈರ,ವಸಂತ ಪೂಜಾರಿ, ರಶ್ಮಿತ್ ಶೆಟ್ಟಿ, ವಸಂತ ಅಣ್ಣಳಿಕೆ, ಹರೀಶ್ ಆಚಾರ್ಯ, ಸಂದೇಶ್ ಶೆಟ್ಟಿ ಪೊಡಂಬು,ಸತೀಶ್ ಪೂಜಾರಿ, ವಿಜಯ ಕುಮಾರ್ ಅಮ್ಟಾಡಿ,ಬಬಿತಾ ಕೋಟ್ಯಾನ್, ಜಯಂತ್ ಗೌಡ, ಜಗದೀಶ್ ಭಂಡಾರಿ, ಮೋನಪ್ಪ ದೇವಶ್ಯ,ಜಿನರಾಜ್ ಕೋಟ್ಯಾನ್, ಜಯಶ್ರೀ , ಅಕ್ಷತಾ, ಆನಂದ ಶಂಭೂರು, ಸದಾಶಿವ ಪೂಜಾರಿ, ರವೀಶ್ ಶೆಟ್ಟಿ ಕರ್ಕಳ,ಅರವಿಂದ ,ನಾರಾಯಣ ಶೆಟ್ಟಿ ತೋಟ, ಶಕೀಲಾ ಪೂಜಾರಿ, ರಘ ಶೆಟ್ಟಿ ಕನ್ಯಾನ, ಆಶ್ವಥ್ ಶೆಟ್ಟಿ ಕರೋಪಾಡಿ, ನವೀನ್ ಕನ್ಯಾನ,ಮಾಂತೇಶ್ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *