ಬಂಟ್ವಾಳ: ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷರು,ಹಿರಿಯ ಪತ್ರಕರ್ತರಾದ ದಿ.ಪ್ರೋ.ಬಾಲಕೃಷ್ಣ ಗಟ್ಟಿ ಅವರಿಗೆ ನುಡಿನಮನ ಕಾರ್ಯಕ್ರಮ ಬಂಟ್ವಾಳ‌ತಾಲೂಕುಬಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.

ಸಂಘದ ಅಧ್ತಕ್ಷ ಪ್ರಶಾಂತ್ ಪುಂಜಾಲಕಟ್ಟೆ ಅವರು ಅಧ್ಯಕ್ಷತೆ ವಹಿಸಿದ್ದರು.ಹಿರಿಯ ಪತ್ರಕರ್ತರಾದ ಗಣೇಶ್ ಪ್ರಸಾದ್ ಪಾಂಡೇಲು,ವೆಂಕಟೇಶ್ ಬಂಟ್ವಾಳ,ಹರೀಶ್ ಮಾಂಬಾಡಿ ಅವರು ದಿವಂಗತ ಪ್ರೋ.ಬಾಲಕೃಷ್ಣ ಗಟ್ಟಿ ಅವರು ಪತ್ರಕರ್ತರಾಗಿ‌,ಸಾಹಿತಿಯಾಗಿ,ಉಪನ್ಯಾಸಕ ರಾಗಿ,ವಿವಿಧ ಶಿಕ್ಷಣ ಸಂಸ್ಥೆಯಲ್ಲಿ ಆಡಳಿತಾಧಿಕಾರಿಯಾಗಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರಲ್ಲದೆ ಗುಣಗಾನ ಮಾಡಿದರು.
ಬಳಿಕ ಮೌನಪ್ರಾರ್ಥನೆಯ ಮೂಲಕ ಶೃದ್ದಾಂಜಲಿ ಅರ್ಪಿಸಲಾಯಿತು. ದ.ಕ.ಜಿಲ್ಲಾ ಕಾರ್ಯನಿರತ ಪತ್ತಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸಂದೀಪ್ ಸಾಲ್ಯಾನ್,ಸಂಘದ ಕಾರ್ಯದರ್ಶಿ ರಹಿಮಾನ್ ತಲಪಾಡಿ,ಉಪಾಧ್ಯಕ್ಷ ವಿಷ್ಣುಗುಪ್ತ ಪುಣಚ, ಸದಸ್ಯರಾದ ಮೌನೇಶ್ ವಿಶ್ವಕರ್ಮ,ರತ್ನದೇವ್ಬಪುಂಜಾಲಕಟ್ಟೆ ಉಪಸ್ಥಿತರಿದ್ದರು. ಪ್ರ.ಕಾರ್ಯದರ್ಶಿ ಮಹಮ್ಮದ್ ಆಲಿ ವಿಟ್ಲ ಸ್ವಾಗತಿಸಿ,ವಂದಿಸಿದರು. 

By Suddi9

Leave a Reply

Your email address will not be published. Required fields are marked *