ಬಂಟ್ವಾಳ : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಇದರ 2026–28ನೇ ಸಾಲಿನಗೆ ನೂತನ ಅಧ್ಯಕ್ಷರಾಗಿ ಬಿ. ರಮೇಶ್ ಸಾಲಿಯಾನ್ ಸಂಚಯಗಿರಿ ಅವರು ಪುನರಾಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ಆದಿತ್ಯವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಸಲಾಯಯಿತು

ಉಳಿದಂತೆ ಪ್ರಧಾನ ಕಾರ್ಯದರ್ಶಿಯಾಗಿ ಎಸ್. ಸತೀಶ್ ಸಂಪಾಜೆ, ಉಪಾಧ್ಯಕ್ಷ ಗಣೇಶ್ ಮರ್ದೋಳಿ, ಜತೆಕಾರ್ಯದರ್ಶಿಗಳಾಗಿ ಜಯಂತ್  ಬಂಗೇರ ವಗ್ಗ , ಪ್ರೇಮಾ ಜನಾರ್ಧನ್ ಪೊಸಳ್ಳಿ,ಕೋಶಾಧಿಕಾರಿಯಾಗಿ ಸೋಮನಾಥ್ ಸಾಲಿಯಾನ್, ಸಂಘಟನಾ ಕಾರ್ಯದರ್ಶಿಯಾಗಿ ಆಶಾ ಗಿರಿಧರ್, ಸೇವಾದಳಪತಿಯಾಗಿ ಚಂದ್ರಶೇಖರ್, ಮಹಿಳಾ ಸಂಘದ ಅಧ್ಯಕ್ಷೆಯಾಗಿ  ವಾರಿಜಾ ಚೇತನ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮಚ್ಚೇಂದ್ರ ಸಾಲಿಯಾನ್, ಜಲಜಾಕ್ಷಿ ಕುಲಾಲ್, ಜನಾರ್ಧನ ಬೊಂಡಾಲ, ರಮೇಶ್ ಸಾಲಿಯಾನ್, ಮಾಧವ ಕುಲಾಲ್ ಬಿ.ಸಿ.ರೋಡು,  ಕವಿತಾ ಯಾದವ್, ಸುರೇಶ್ ಕುಲಾಲ್ ಬಂಟ್ವಾಳ ಅವರು ಆಯ್ಕೆಯಾಗಿದ್ದಾರೆ.
ಇದೇ ವೇಳೆ ಬಂಟ್ವಾಳ ಕುಲಾಲ ಸಮುದಾಯ ಭವನದ ಮೇಲಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಮಂಜೂರುಗೊಳಿಸುವಲ್ಲಿ ಶ್ರಮಿಸಿದ ಕಟ್ಟಡ ಸಮಿತಿಯ ಅಧ್ಯಕ್ಷ ಸುರೇಶ್ ಕುಮಾರ್ ನಾವೂರು ಅವರನ್ನು  ಅಭಿನಂದಿಸಲಾಯಿತು.

By Suddi9

Leave a Reply

Your email address will not be published. Required fields are marked *