ಬಂಟ್ವಾಳ: ಕೂಟ ಮಹಾ ಜಗತ್ತು ಬಂಟ್ವಾಳ ಅಂಗಸಂಸ್ಥೆ ಇದರ 21ನೇ ಸಂಪರ್ಕಸಭೆಯು ನಿವೃತ್ತ ಮುಖ್ಯೋಪಾಧ್ಯಾಯ ಕೆದ್ಲಾ ಪರಮೇಶ್ವರ ರಾವ್ ಅವರ ಮನೆಯಲ್ಲಿ ಸಂಸ್ಥೆಯ ಅಧ್ಯಕ್ಷ ಕೋರ್ಯ ರಮೇಶಹೊಳ್ಳರವರ ಅಧ್ಯಕ್ಷತೆಯಲ್ಲಿ ನಡೆಯಿತು..
ಈ ಸಂದರ್ಭ ಶ್ರೀ ಲಕ್ಷ್ಮಿ ನರಸಿಂಹ ಅಷ್ಟೋತ್ತರ ಶತ ದಿವ್ಯ ನಾಮಾವಳಿ, ಶ್ರೀ ವಿಷ್ಣು ಸಹಸ್ರನಾಮ ಮಂತ್ರ ಪುಷ್ಪ ಪಠಣ, ಹರಿ ನಾಮ ಸಂಕೀರ್ತನೆ ಸಾಮೂಹಿಕವಾಗಿ ನಡೆಸಲಾಯಿತು.

ಸಭೆಯಲ್ಲಿ ಕೂಟ ಬ್ರಾಹ್ಮಣರ ವಿವಾಹ ಸಂಪರ್ಕ ವ್ಯವಸ್ಥೆ ಮಾಡುವಂತೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು ಸಜೀಪಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಗುರು ಗಾಯತ್ರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಆನಂದ ಸೋಮಯಾಜಿ, ಲೋಕೋಪಯೋಗಿ ಇಲಾಖೆಯ ನಿವೃತ್ತ ಇಂಜಿನಿಯರ್ ಶ್ರೀನಿವಾಸ ಹೊಳ್ಳ ಎಂ, ಗೌರವಾಧ್ಯಕ್ಷ  ಜಯಶಂಕರ ಬಾಸ್ರಿತ್ತಾಯ, ಕಾರ್ಯದರ್ಶಿ ರಾಮಕೃಷ್ಣರಾವ್ ಎಂ, ಜತೆಕಾರ್ಯದರ್ಶಿ ಎ ರವಿಶಂಕರ ಮಯ್ಯ, ಮಹಿಳಾ ವೇದಿಕೆ ಅಧ್ಯಕ್ಷೆ ಯಮುನಾ ಐಗಳ್, ಪಯಣ ಟೂರ್ಸ್ ಮುಖ್ಯಸ್ಥ ಹರೀಶ್ ರಾವ್ ಮೊದಲಾದವರು ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *