ಬಂಟ್ವಾಳ: ಸಜೀಪಮೂಡ ಶ್ರೀ ಬಾಲ ಗಣಪತಿ ದೇವಸ್ಥಾನದ ವಠಾರದಲ್ಲಿ ಜೂ. 28ರಂದು ಕೆಸರು ಗದ್ದೆ ಕ್ರೀಡಾಕೂಟ ನಡೆಸುವ ಬಗ್ಗೆ ಪೂರ್ವಭಾವಿ ಸಿದ್ಧತಾ ಸಭೆ ಆಡಳಿತ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆಗುತ್ತು ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಗಣೇಶ ಚತುರ್ಥಿಯ ಪ್ರಯುಕ್ತ ಭಕ್ತರಿಗೆ ಭತ್ತದಕದಿರು (ತೆನೆ) ವಿತರಿಸಲು ಅನುಕೂಲವಾಗುವಂತೆ ದೇವಾಲಯದ ಗದ್ದೆಯಲ್ಲಿ ಪಾರಂಪರಿಕ ರೀತಿಯಲ್ಲಿ ಭತ್ತದ ಕೃಷಿ ಕಾರ್ಯ ಹಮ್ಮಿಕೊಳ್ಳಲು ಸಾಮೂಹಿಕವಾಗಿ ಭತ್ತದ ನಾಟಿ ನಡೆಸುವ  ನಿಟ್ಟಿನಲ್ಲಿ ಸಾರ್ವಜನಿಕರಿಗೆ ಕೆಸರುಗದ್ದೆ ಕ್ರೀಡಾಕೂಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


ಸಜೀಪ ಮಾಗಣೆತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ, ಸಜೀಪಮೂಡ ಸರಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್ ಶ್ರೀಕಾಂತ ಶೆಟ್ಟಿ, ನೇತಾಜಿ ಯುವಕ ಸಂಘ ಅಧ್ಯಕ್ಷ ನಿತಿನ್ ಅರಸ, ಪಂಚಾಯಿತಿ ಮಾಜಿ ಅಧ್ಯಕ್ಷ ವಿಶ್ವನಾಥ ಬೆಳ್ಚಡ, ಮಾಜಿ ಪಂಚಾಯತಿ ಸದಸ್ಯ ಭಾಸ್ಕರ, ಒಡಿಯೂರು ಗ್ರಾಮಾಭಿವೃದ್ಧಿ ಯೋಜನೆ, ಸಂಯೋಜಕಿ ಸರಸ್ವತಿ ಶೆಟ್ಟಿ,, ಮಹಿಳಾ ಸಮಿತಿ ಅಧ್ಯಕ್ಷ ವಿಜಯ ದೋಟ, ಕಾರ್ಯದರ್ಶಿ ಸುಜಾತ,ರಮೇಶ ಅನ್ನಪಾಡಿ, ಮನ್ವಿತ್, ಸುರೇಶ್ ಬಂಗೇರ, ಪ್ರೇಮನಾಥದೇರಾಜೆ ,ಪ್ರಮೋದ್ ಸಾನದ ಮನೆ, ಲಿಂಗಪ್ಪ ದೋಟ, ಪುರುಷೋತ್ತಮ ಕಾರಾಜೆ,ರಾಜೇಶ ಕೇಪಳ ಗುಡ್ಡೆ, ಮೊದಲಾದವರು  ಸಲಹೆ ಸೂಚನೆ ನೀಡಿದರು ದೇವಾಲಯದ ಪ್ರಬಂಧ ಪ್ರಶಾಂತ್ ಕುಮಾರ್  ಸ್ವಾಗತಿಸಿ, ವಂದಿಸಿದರು.

 ಕ್ರೀಡಾಕೂಟದ ಅಂಗವಾಗಿ ಬಾಲಕರು, ಬಾಲಕಿಯರು, ಪುರುಷರು, ಮಹಿಳೆಯರಿಗೆ ವಿವಿಧ ಆಟೋಟಸ್ಪರ್ಧೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ..
ಅದೇ ರೀತಿ ಪ್ರಸ್ತುತ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು  ಪುರಸ್ಕರಿಸಲು ತೀರ್ಮಾನಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *