ಬಂಟ್ವಾಳ: ನಂದಾವರ ಚಿಕ್ಕಮೇಳ ಆರನೇ ವರ್ಷದ ಮಳೆಗಾಲದ ತಿರುಗಾಟ ಮನೆ ಮನೆಗೆ ಯಕ್ಷಗಾನ ಶ್ರೀ ಕ್ಷೇತ್ರ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ದೇವಸ್ಥಾನದಲ್ಲಿ ಗೆಜ್ಜೆ ಪೂಜೆಯೊಂದಿಗೆ ಪ್ರಥಮ ಸೇವೆ ಆದ ಮೂಲಕ ತಿರುಗಾಟಕ್ಕೆ ಚಾಲನೆ ನೀಡಲಾಯಿತು.

ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ದೇವಳದ ಪ್ರಧಾನ ಅರ್ಚಕ ಮಹೇಶ್ ಕುಮಾರ್ ಭಟ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ ಪ್ರಭಾಕರ ಶೆಟ್ಟಿ, ಮಾಜಿ ಅಧ್ಯಕ್ಷ ಪದ್ಯಾಣಅರವಿಂದ ಭಟ್, ಚಿಕ್ಕ ಮೇಳದ ಸಂಚಾಲಕ ಭಾಸ್ಕರ ಸರಪಾಡಿ ಹಿಮ್ಮೇಳ,ಮುಮ್ಮೆಳದ ಕಲಾವಿದರು ಉಪಸ್ಥಿತರಿದ್ದರು
