ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರ 12 ವರ್ಷಗಳನ್ನು ಪೂರೈಸಿದ ಮತ್ತು ಭಾರತದ ಅತೀ ದೀರ್ಘಾವಧಿ ಚುನಾಯಿತ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿಯವರು ಪಾತ್ರರಾದ ಹಿನ್ನಲೆಯಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ, ಸಿದ್ದಕಟ್ಟೆ ಸಮೀಪದ ಶ್ರೀ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿವಿಶೇಷ ಹೂವಿನ ಪೂಜೆ ಮತ್ತು ಸಾರ್ವತ್ರಿಕ ಪ್ರಾರ್ಥಿಸಲಾಯಿತು.

ದೇವಸ್ಥಾನದ ಕೃಷ್ಣ ಪ್ರಸಾದ್ ಅಸ್ರಣ್ಣ ರವರು ವಿಶೇಷ ಪೂಜೆ ನೆರೆವೇರಿಸಿ ದೇಶಕ್ಕೆ ಬರುವ ಆಪತ್ತು ಹಾಗೂ ಪ್ರಧಾನಿ ಮೋದಿ ಯವರಿಗೆ ಬರುವ ಎಲ್ಲಾ ವಿಧದ ಸಮಸ್ಯೆಗಳನ್ನು ಪರಿಹರಿಸಿ ಜಗತ್ತಿನಲ್ಲಿಯೇ ಭಾರತ ವಿಶ್ವ ಗುರು ಆಗುವ ಮೂಲಕೆ ಎಲ್ಲರಿಗೂ ಶಾಂತಿ ಲಭಿಸಲಿ ಎಂದೂ ಪ್ರಾರ್ಥಿಸಲಾಯಿತು.
*ಈ ಸಂದರ್ಭದಲ್ಲಿ ಸಿದ್ಧಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭು,ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಪ್ರಭಾಕರ. ಎಚ್ ಹುಲಿಮೇರು, ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ದಿನೇಶ್ ಪೂಜಾರಿ ಹುಲಿಮೇರು, ಬಿಜೆಪಿ ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಆಶಾ ಎಸ್. ಶೆಟ್ಟಿ, ಬೆಳ್ತಂಗಡಿ ಮಂಡಲ ಆರಂಬೋಡಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರಾದ ಸುರೇಂದ್ರ ಶೆಟ್ಟಿ ಅಜ್ಜಾಡಿ, ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಉಪಸ್ಥಿತರಿದ್ದರು
