ಬಂಟ್ವಾಳ: ದ.ಕ. ಜಿಲ್ಲಾ ಗ್ಯಾರೇಜು ಮಾಲಕರ ಸಂಘದ ಬಂಟ್ವಾಳ ವಲಯದ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ಗಾಣದ ಪಡ್ಪುವಿನಲ್ಲಿರುವ  ಆಟೋಲೈನ್ಸ್  ಸಭಾಂಗಣದಲ್ಲಿ ಭಾನುವಾರ ನಡೆಯಿತು. 
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉದ್ಯಮಿ ಸಂದೇಶ್ ಶೆಟ್ಟಿ ಅರೆಬೆಟ್ಟು ಮಾತನಾಡಿ ಗ್ಯಾರೇಜು ಮಾಲಕರ ಸಂಘದಲ್ಲಿ ಮಾತು ಮೌನವಾಗಿ, ಕೆಲಸ ಮಾತನಾಡುತ್ತಿದೆ,  ಸಮಾಜದಲ್ಲಿ ಸಂಘಟನೆ‌ ಹೇಗೆ ಇರಬೇಕು, ಹೇಗೆ ಬೆಳೆಯಬೇಕು ಎನ್ನುವುದಕ್ಕೆ ಗ್ಯಾರೇಜು ಮಾಲಕರ ಸಂಘದ ಬಂಟ್ವಾಳ ವಲಯ ಮಾದರಿಯಾಗಿದೆ ಎಂದರು.
ಜಿಲ್ಲಾ ಸಂಘದ ಉಪಾಧ್ಯಕ್ಷ ಸತೀಶ್ ಪೂಜಾರಿ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಭೋದಿಸಿದರು. ಅವರು ಮಾತನಾಡಿ ಸುಧೀರ್ ಪೂಜಾರಿ ನೇತ್ರತ್ವದಲ್ಲಿ ಸಂಘ ಉತ್ತಮ‌ ಕೆಲಸ ಮಾಡಿದ್ದು ಮುಂದಿನ ದಿನಗಳಲ್ಲೂ ಮಾತೃ ಸಂಘದಿಂದ‌ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು.
ನಿರ್ಗಮನ‌ ಅಧ್ಯಕ್ಷ ಸುಧೀರ್ ಪೂಜಾರಿ , ನೂತನ ಅಧ್ಯಕ್ಷ ಗಣೇಶ್ ಸುವರ್ಣ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಾದ ಯಶ್ವಿತ್ ಆರ್ ಪೂಜಾರಿ ಹಾಗೂ ತನ್ವಿ ಸುವರ್ಣ ಅವರನ್ನು ಅಭಿನಂದಿಸಲಾಯಿತು. ನೂತನ ಸದಸ್ಯರನ್ನು ವಲಯಕ್ಕೆ ಸೇರಿಸಿಕೊಳ್ಳಲಾಯಿತು. ನಿರ್ಗಮನ ಅಧ್ಯಕ್ಷ ,ಕಾರ್ಯದರ್ಶಿ, ಕೋಶಾಧಿಕಾರಿ ಯನ್ಮು ಅಭಿನಂದಿಸಲಾಯಿತು. ಸಂಘದ ಗೌರವ ಸಲಹೆಗಾರ ಸುಧಾಕರ ಸಾಲ್ಯಾನ್ ಅವರನ್ನು ಗೌರವಿಸಲಾಯಿತು.ಸಂಘದ ಸದಸ್ಯ ದಯಾನಂದ ಮೊಗರ್ನಾಡು ಅವರ ವೈವಾಹಿಕ ಬೆಳ್ಳಿಹಬ್ಬದ ಪ್ರಯುಕ್ತ ದಂಪತಿಯನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ  ಜಿಲ್ಲಾ ಸಂಘದ ಕೋಶಾಧಿಕಾರಿ ಕಿರಣ್ ರಾಜ್  ಉಪಸ್ಥಿತರಿದ್ದರು.
ಬಂಟ್ವಾಳ ವಲಯದ ನಿಯೋಜಿತ ಉಪಾಧ್ಯಕ್ಷ ಪ್ರಶಾಂತ್ ಭಂಡಾರ್ ಕಾರ್ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಕುಲಾಲ್ ವರದಿ ವಾಚಿಸಿದರು, ಕೋಶಾಧಿಕಾರಿ ಭಾಸ್ಕರ ಕುಲಾಲ್ ಲೆಕ್ಕ ಪತ್ರ ಮಂಡಿಸಿದರು. ನವೀನ್ ವಂದಿಸಿದರು.
ಗೌರವ ಸಲಹೆಗಾರ ಸುಧಾಕರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. 

By suddi9

Leave a Reply

Your email address will not be published. Required fields are marked *