ಬಂಟ್ವಾಳ : ಶ್ರೀ ವನದೇವಿ ಯಕ್ಷಿಣಿ ಜಲನಾಗ ಪುಷ್ಕರಿಣಿ ಮತ್ತು ಧರ್ಮದೈವಗಳ ಸಾನಿಧ್ಯ ರಿ. ಟ್ರಸ್ಟ್ ಕೆಳಗಿನ ಮಂಡಾಡಿ ಗಿರಿಗುಡ್ಡೆ ಇದರ ಜಲನಾಗ ಪುಷ್ಕರಿಣಿಯ ಭೂಮಿಪೂಜೆಯನ್ನು ವಸಂತ ಶಾಂತಿಯವರ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು . ಜಿ.ಪಂ.ಚಂದ್ರಪ್ರಕಾಶ್ ಶೆಟ್ಟಿ , ತಾ.ಪಂ.ಸದಸ್ಯ ಪದ್ಮಶೇಖರ ಜೈನ್ , ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್ , ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ , ಉದ್ಯಮಿಗಳಾದ ಪಿಯೂಸ್ ಎಲ್. ರೋಡ್ರಿಗಸ್ , ಪ್ರಭಾಕರ ಯೆಯ್ಯಾಡಿ ಮಂಗಳೂರು , ಶೀನಪ್ಪ ಕುಲಾಲ್ , ಪುರಸಭಾ ಸದಸ್ಯ ಪ್ರವೀಣ್ ಬಿ. , ಗಂಗಾಧರ ಪೂಜಾರಿ , ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮ ಪೂಜಾರಿ , ಜನಾರ್ಧನ ಚೆಂಡ್ತಿಮಾರ್ , ವಿಶ್ವನಾಥ ಮಣಿ ಮತ್ತಿತರರು ಉಪಸ್ಥಿತರಿದ್ದರು.

