ಬಂಟ್ವಾಳ : ಕಾರಿಂಜಬೀಡು ಕೊಡ್ಯಮಲೆ ರಕ್ಷಿತಾರಣ್ಯದ ಹತ್ತಿರ 2014-15ನೇ ಸಾಲಿನಲ್ಲಿ 03 ಒಪಿ ಶೀರ್ಷಿಕೆಯಡಿ ಬೆಳೆಸಲಾದ ವಿವಿಧ ಜಾತಿಯ (ಬೀಟೆ , ಭೇಂಗ , ಧೂಪ , ಬೆತ್ತ , ಮಾವು , ರೆಂಜ) ಎ.ಎನ್.ಆರ್ ನೆಡುತೋಪು 15 ಹೆಕ್ಟೇರ್ ಹಾಗೂ ಕುಕ್ಕಿಮಾರ್ ಶೆಡ್ಡೆ 15 ಹೆಕ್ಟೇರು ನೆಡು ತೋಪನ್ನು ಹಾಗೂ 2013-14ನೇ ಸಾಲಿನಲ್ಲಿ ಬೆಳೆಸಲಾದ ನೂಜಿ 25 ಹೆಕ್ಟೇರ್ ನೆಡುತೋಪನ್ನು ಜನಪ್ರತಿನಿಧಿಗಳಾದ ತಾ.ಪಂ.ಸದಸ್ಯ ಪದ್ಮಶೇಖರ್ ಜೈನ್ , ಕಾವಳಪಡೂರು ಗ್ರಾ.ಪಂ.ಅಧ್ಯಕ್ಷ ಅಬ್ದುಲ್ ರಜಾಕ್ ವೀಕ್ಷಿಸಿದರು . ವಲಯಾರಣ್ಯಾಧಿಕಾರಿ ಸುಬ್ರಹ್ಮಣ್ಯ ರಾವ್ , ಉಪವಲಯಾರಣ್ಯಾಧಿಕಾರಿ ಕೆ.ಸಿ.ಮ್ಯಾಥ್ಯೂ ಹಾಗೂ ಅರಣ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು .

ಮಾನ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಯವರ ನಿರ್ದೇಶನದಂತೆ ಕಾರಿಂಜೇಶ್ವರ ದೇವಸ್ಥಾನದ ಬಳಿ ನಿರ್ಮಾಣವಾಗುತ್ತಿರುವ ದೈವೀ ವನ ಕಾಮಗಾರಿಯನ್ನು ಇದೇ ಸಂದರ್ಭದಲ್ಲಿ ವೀಕ್ಷಿಸಲಾಯಿತು.
