ಬಂಟ್ವಾಳ: ವಾಮದಪದವು ಸರಕಾರಿ ಪದವಿ ಕಾಲೇಜಿನ ಅಭಿವೃದ್ಧಿ ಸಮಿತಿ ಸಭೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಅಧ್ಯಕ್ಷತೆಯಲ್ಲಿ  ಕಾಲೇಜಿನಲ್ಲಿ ನಡೆಯಿತು.
  ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ   ಗ್ರಾಮಸ್ಥರ ಸಹಕಾರ ಪಡೆದು ಕಾಲೇಜು ಅಭಿವೃದ್ದಿ ಸಮಿತಿ ಶ್ರಮವಹಿಸಬೇಕು ಎಂದರು.

ಕಾಲೇಜಿನ ಆವರಣ ಗೋಡೆ, ಅರ್ಧದಲ್ಲಿ ನಿಂತಿರುವ  ಕಾಲೇಜಿನ ಸಭಾ ಭವನದ  ಕಾಮಗಾರಿ ಹಾಗೂ ಆಧ್ಯತೆಯ ನೆಲೆಯಲ್ಲಿ  ಮಾಡಬೇಕಾದ ಕೆಲಸಗಳನ್ನು ಪೂರ್ಣಗೊಳಿಸುವ ಭರವಸೆಯನ್ನು ಶಾಸಕರು ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಕೆ. ಜಿ ಮಹೇಶ್ ಪ್ರಸಾದ್ ,ಉಪನ್ಯಾಸಕರಾದ ಚಂದ್ರ, ಉದಯ್, ಪ್ರಮುಖರಾದ ಚಂದ್ರಶೇಖರ ಶೆಟ್ಟಿ, ಪುರುಷೋತ್ತಮ ಶೆಟ್ಟಿ ವಾಮದಪದವು, ದಿನೇಶ್ ಶೆಟ್ಟಿ ದಂಬೆದಾರ್, ರವಿರಾಮ ಶೆಟ್ಟಿ, ನವೀನ್ ಚಂದ್ರ ಶೆಟ್ಟಿ, ಉದಯಕುಮಾರ್ ಶೆಟ್ಟಿ, ಅನಂತ್ ಪೈ, ಶ್ರೀಧರ್ ಪೈ, ಆನಂದ್ ಆಚಾರ್ಯ, ಮೋಹನ್ ದಾಸ್ ಗಟ್ಟಿ, ರಾಜೀವ್ ಗಟ್ಟಿ, ಅಮ್ಮು ರೈ ಹರ್ಕಾಡಿ, ಪ್ರವೀಣ್ ಗಟ್ಟಿ, ವಿನಾಯಕ ಪ್ರಭು ಮತ್ತಿತರರು ಉಪಸ್ಥಿತರಿದ್ದರು. 

By Suddi9

Leave a Reply

Your email address will not be published. Required fields are marked *