ಬಂಟ್ವಾಳ : ಕಜೆಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ನಿ.)ಪಾಂಡವರಕಲ್ಲು ಇದರ ಆಶ್ರಯದಲ್ಲಿ ಸ್ವರ್ಣ ಸಂಜೀವಿನಿ ಸೇವಾ ಟ್ರಸ್ಟ್ (ರಿ.)ಮಡವು ಇದರ ಸಹಯೋಗದೊಂದಿಗೆ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ, ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಮಂಗಳೂರು, ಮತ್ತು ಬ್ಲಡ್ ಸೆಂಟರ್ ಕೆ.ಎಂ.ಸಿ ಮಂಗಳೂರು, ಇಲ್ಲಿನ ನುರಿತ ತಜ್ಞವೈದ್ಯ ತಂಡದವರಿಂದ ಉಚಿತ ವೈದ್ಯಕೀಯ ತಪಾಸಣೆ, ದಂತ ಚಿಕಿತ್ಸಾ ಹಾಗೂ ಸಾರ್ವಜನಿಕ ರಕ್ತದಾನ ಶಿಬಿರ ಸಂಘದ ಸಭಾಭವನದಲ್ಲಿ ನಡೆಯಿತು. ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಬಂಗೇರ ಕಜೆಕಾರು ಅವರ ಅಧ್ಯಕ್ಷತೆ ವಹಿಸಿದ್ದರು.

ಸಂಘದ ಉಪಾಧ್ಯಕ್ಷ ಮೋಹನಂದ ಪಾಂಡವರಕಲ್ಲು,ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಧಾಕರ ಐಂಬಲೋಡಿ, ನಿವೃತ್ತ ಮುಖ್ಯ ಉಪಾಧ್ಯಾಯ ಹಮೀದ್ .ಪಿ, ಬಡಗಕಜೆಕಾರು ಗ್ರಾಮ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷ ಡೀಕಯ್ಯ ಬಂಗೇರ ಕರ್ಲ,ಡಾ.ಅರವಿದ್, ಡಾ. ಅವಿನಾಶ್, ಅತ್ತಾವರ ಕೆಎಂಸಿ ಆಸ್ಪತ್ರೆಯ ಪಿ ಆರ್ ಒ ಆಲ್ಬರ್ಟ್ , ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಅರ್ಜುನ್ ಭಂಡಾರ್ಕರ್ ಉಪಸ್ಥಿತರಿದ್ದರು.
ಇದೇ ವೇಳೆ ಸ್ವರ್ಣ ಸಂಜೀವಿನಿ ಮಡವು ಇದರ ಮೇ ತಿಂಗಳ ಸೇವಾ ಯೋಜನೆಯಾಗಿ 5 ಬಡ ಕುಟುಂಬಗಳಿಗೆ ಸಹಾಯಹಸ್ತದ ಚೆಕ್ ನ್ನು ಹಸ್ತಾಂತರಿಸಲಾಯಿತು. ಯಶವಂತ ಕೊಡ್ಯೇಲು ಸ್ವಾಗತಿಸಿದರು, ಪ್ರೇಮನಾಥ ಕಿಜನಾರು ವಂದಿಸಿದರು, ತಾರಾನಾಥ್ ಕಜೆಕಾರ್ ಕಾರ್ಯಕ್ರಮ ನಿರೂಪಿಸಿದರು. ಸುಮಾರು 250ಕ್ಕೂ ಹೆಚ್ಚು ಮಂದಿ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು .
ಸುಮಾರು 80 ಮಂದಿ ರಕ್ತದಾನಗೈದರು. ಕಜೆಕಾರು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರುಗಳು, ಸದಸ್ಯರು, ಸ್ವರ್ಣ ಸಂಜೀವಿನಿ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
