ಬಂಟ್ವಾಳ: ಪುದು ಗ್ರಾಮದ‌ ಸುಜೀರು ದತ್ತನಗರದಲ್ಲಿರುವ ಶ್ರೀ ವೀರ ಹನುಮಾನ್ ಮಂದಿರದ ವತಿಯಿಂದ‌ ಸ್ಥಳೀಯ ವಿದ್ಯಾರ್ಥಿಗಳ ಶಾಲಾ ಕಲಿಕೆಗೆ ಪೂರಕವಾಗುವ ನಿಟ್ಟಿನಲ್ಲಿ ಆರ್ಥಿಕ ಸಹಾಯವನ್ನು ನೀಡಲಾಯಿತು.
ಮಂದಿರದ ವಠಾರದಲ್ಲಿ ಬುಧವಾರ ಬೆಳಿಗ್ಗೆ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪೊಳಲಿ ಗಿರಿಪ್ರಕಾಶ್ ತಂತ್ರಿ ವಿದ್ಯಾನಿಧಿಯನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಅವರು ಮಾತನಾಡಿ ಇಂದು ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ಕಾಣುತ್ತಿದ್ದು ವಿದ್ಯಾರ್ಥಿಗಳು ಸಂಸ್ಕಾರವನ್ನು ರೂಢಿಸಿಕೊಂಡು ವಿದ್ಯಾವಂತರಾಗಬೇಕು.‌ ಸ್ಥಳೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ  ಪುಸ್ತಕ ವಿತರಣಾ ಕಾರ್ಯಕ್ತಮವನ್ನು ವೀರ ಹನುಮಾನ್ ಮಂದಿರದ ವತಿಯಿಂದ ನಿರಂತರವಾಗಿ ಹಮ್ಮಿಕೊಂಡು ಬರುತ್ತಿರುವುದು ಅಭಿನಂದನೀಯ ಎಂದರು.

ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ ಪ್ರಾಸ್ತವಿಕವಾಗಿ ಮಾತನಾಡಿ ಮಂದಿರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು ಕೆಲವೊಂದು ಯೋಜನೆಗಳನ್ನು ಹಾಕಿಕೊಂಡಿದೆ. ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಪುಸ್ತಕಗಳು ಸಿಗುವ ಕಾರಣ ಈ ವರ್ಷ ಅದರ ಮೌಲ್ಯವನ್ನು ನಗದು ರೂಪದಲ್ಲಿ ನೀಡಲಾಗಿದೆ ಎಂದು ತಿಳಿಸಿದರು.
ಕುದ್ರೋಳಿ ಭಗವತಿ ಕ್ಷೇತ್ರದ ಅರ್ಚಕ  ಬೀರಣ್ಣ ಆತರ್,
ಯಶೋಧ ಎ.‌ಶೆಟ್ಟಿ ಪುದು ಗ್ರಾ.ಪಂಚಾಯತಿ ಸದಸ್ಯ ವಿಶುಕುಮಾರ್ , ನಿವೃತ್ತ ಸೇನಾಧಿಕಾರಿ ದಾಮೋದರ ಸಪಲ್ಯ,  ಜೆಸಿಐ ವಲಯ ತರಬೇತುದಾರ ಸಂದೀಪ್ ಸಾಲ್ಯಾನ್, ಮಹಿಳಾ ಸಮಿತಿ ಅಧ್ಯಕ್ಷೆ ಮೀನಾಕ್ಷಿ, ಉತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗಣೇಶ್ ದತ್ತನಗರ ಸ್ವಾಗತಿಸಿ, ವಂದಿಸಿದರು. ‌ಆಡಳಿತ ಮಂಡಳಿ ಕೋಶಾಧಿಕಾರಿ ರವೀಂದ್ರ ಪ್ರಮುಖರಾದ ಸಂದೀಪ್ ದತ್ತನಗರ, ಎಸ್. ಜಯ, ಯಶೋಧರ ಬೆಳ್ಚಾಡ ಮತ್ತಿತರರು ಭಾಗವಹಿಸಿದ್ದರು. ಸ್ಥಳೀಯ 40 ಮಕ್ಕಳಿಗೆ ವಿದ್ಯಾನಿಧಿ ಹಸ್ತಾಂತರಿಸಲಾಯಿತು. 

By Suddi9

Leave a Reply

Your email address will not be published. Required fields are marked *