ಗುರುಪುರ : ಮುಂಬೈ ಮತ್ತು ಮಂಗಳೂರು ಮಧ್ಯೆ ಪ್ರತಿನಿತ್ಯ ಸಂಚರಿಸುವ ಇನ್ನೊಂದು ಸೂಪರ್ಫಾಸ್ಟ್ ರೈಲು ಹಾಗೂ ಮುಂಬೈ-ಮಂಗಳೂರಿಗೆ ವಂದೇ ಭಾರತ್ ನೇರ ಸಂಚಾರದ ರೈಲು ಸೇವೆ ಆರಂಭಿಸುವಂತೆ ಒತ್ತಾಯಿಸಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸ್ಥಾಪಕಾಧ್ಯಕ್ಷ ತೋನ್ಸೆ ಜಯಕೃಷ್ಣ ಶೆಟ್ಟಿ ಅವರು ಮೇ. ೨೩ರಂದು ಗುರುಪುರ ಜಂಗಮ ಮಠದಲ್ಲಿ ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರ ಸಮ್ಮುಖದಲ್ಲಿ ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ನೀಡಿದರು.

ಕೊಂಕಣ್ ರೈಲ್ವೇ ಆರಂಭದ ದಿನಗಳಿಂದಲೂ ಕರಾವಳಿ ಪ್ರದೇಶದಲ್ಲಿ ರೈಲ್ವೇ ಅಭಿವೃದ್ಧಿಗೆ ಶ್ರಮಿಸಿರುವ ಸಮಿತಿ ಈ ಬಾರಿ, ಮುಂಬೈಯಿAದ ಮಂಗಳೂರು ಮತ್ತು ಉಡುಪಿ ಭಾಗದ ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ ರೈಲು ಸೇವೆ ನೀಡುವ ನಿಟ್ಟಿನಲ್ಲಿ ಮತ್ಸ್ಯಗಂಧಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲಿಗೆ ಪರ್ಯಾಯವಾಗಿ ಇನ್ನೊಂದು ಸೂಪರ್ಫಾಸ್ಟ್ ರೈಲು ಪರಿಚಯಿಸಿಬೇಕು. ಮುಂಬೈಯಿAದ ಮಡ್ಗಾಂವ್ಗೆ ಮತ್ತು ಮಡ್ಗಾಂವ್ನಿAದ ಮಂಗಳೂರಿಗೆ ವಂದೇ ಭಾರತ್ ರೈಲು ಪ್ರಯಾಣ ಕಷ್ಟಕರವಾಗಿದ್ದು, ಕರಾವಳಿ ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಮುಂಬೈ-ಮAಗಳೂರು ಮಧ್ಯೆ ನೇರ ಸಂಚಾರದ `ವಂದೇ ಭಾರತ್’ ರೈಲು ಪರಿಚಯಿಸಬೇಕು ಎಂದು ಆಗ್ರಹಿಸಿದೆ.
ಮುಂಬೈ-ಮAಗಳೂರು ಮಧ್ಯೆ ಸಂಚರಿಸುವ ಮತ್ಸ್ಯಗಂಧಾ ಎಕ್ಸ್ಪ್ರೆಸ್ ಮತ್ತು ರಾತ್ರಿ ವೇಳೆ ಸಂಚರಿಸುವ ಮುಂಬೈ-ಮAಗಳೂರು ಎಕ್ಸ್ಪ್ರೆಸ್(ಟ್ರೇನ್ ನಂಬ್ರ ೧೨೧೩೩/೧೨೧೩೪) ರೈಲುಗಳಲ್ಲಿ ಕೊಂಕಣ ಭಾಗದ ಪ್ರಯಾಣಿಕರಿಗೆ ಟಿಕೆಟ್ ಸಿಗುವುದು ಕಷ್ಟವಾಗಿದ್ದು, ತತ್ಕಾಲ್ ಟಿಕೆಟ್ ಮತ್ತಷ್ಟು ಕಷ್ಟದಾಯಕವಾಗಿದೆ. ಕರಾವಳಿ ಭಾಗಕ್ಕೆ ಇನ್ನೆರಡು ಹೊಸ ರೈಲುಗಳ ಪರಿಚಯಿಸಿದಲ್ಲಿ, ಈ ಭಾಗವು ವಾಣಿಜ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾಣಲಿದೆ ಎಂದು ಸಮಿತಿ ಹೇಳಿದೆ.

ಮುಂಬೈ-ಮಂಗಳೂರು ಕೊಂಕಣ ಪ್ರಾಂತ್ಯಕ್ಕೆ ಹೆಚ್ಚುವರಿ ಹೊಸ ರೈಲುಗಳ ಪರಿಚಯಿಸಿದಲ್ಲಿ ದ.ಕ ಜಿಲ್ಲೆಯ ಕೈಗಾರಿಕೋದ್ಯಮ ಹಾಗೂ ಶೈಕ್ಷಣಿಕ ಕ್ಷೇತ್ರದ ಮೇಲೆ ತುಂಬಾ ಪ್ರಭಾವ ಬೀರಲಿದೆ. ಹೊಸ ರೈಲುಗಳು ನಿತ್ಯ ತುಂಬಿ ಸಂಚರಿಸಲಿವೆ ಎಂದು ಮನವಿಯಲ್ಲಿ ವಿವರಿಸಿರುವ ತೋನ್ಸೆ ಜಯಕೃಷ್ಣ ಶೆಟ್ಟಿ ಅವರು ಪ್ರಯಾಣಿಕರ ದಟ್ಟಣಿ ಹೆಚ್ಚಿರುವ ಉಡುಪಿ, ಮೂಲ್ಕಿ ಮತ್ತು ಸುರತ್ಕಲ್ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಮೂಲಸೌಕರ್ಯಗಳಿಲ್ಲ. ಈ ನಿಲ್ದಾಣಗಳಿಗೆ ಮೇಲ್ಛಾವಣಿ ಹಾಸಬೇಕು ಮತ್ತು ಸೂಕ್ತ ವೈಟಿಂಗ್ ರೂಮ್ ಕಲ್ಪಿಸಬೇಕು ಎಂದು ಸಮಿತಿ ಒತ್ತಾಯಿಸಿದೆ.
ಸಚಿವ ವಿ. ಸೋಮಣ್ಣ ಅವರು ಮಾತನಾಡಿ, “ಕೊಂಕಣ ರೈಲ್ವೇ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಈ ಭಾಗದಲ್ಲಿ ಹೆಚ್ಚುವರಿ ರೈಲು ಓಡಿಸುವ ವಿಚಾರದಲ್ಲಿ ಪರಿಶೀಲಿಸಲಾಗುವುದು. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ನೀಡಿರುವ ಮನವಿ ಬಗ್ಗೆ ಸಂಸದ ಕ್ಯಾ. ಬ್ರಿಜೇಶ್ ಚೌಟರೊಂದಿಗೆ ಸಮಾಲೋಚಿಸಲಾಗುವುದು ಎಂದರು.
