ಬಂಟ್ವಾಳ : ಪ್ರಾಥಮಿಕ ಆರೋಗ್ಯ ಕೇಂದ್ರ  ಕಲ್ಲಡ್ಕ-ಬಾಳ್ತಿಲ ವತಿಯಿಂದ  ನರಿಕೊಂಬು ಗ್ರಾಮದ ಸರ್ಕಾರಿ  ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಕ್ಷಯರೋಗ  ತಪಾಸಣಾ ಹಾಗೂ ಹೃದಯ ಎಕ್ಸ್-ರೇ ಶಿಬಿರ  ನಡೆಯಿತು.
ಕೇಂದ್ರ ಟಿಬಿ ವಿಭಾಗವು ನರಿಕೊಂಬು ಗ್ರಾಮವನ್ನು “ಹೈ ರಿಸ್ಕ್ ವಿಲೇಜ್” ಎಂದು ಗುರುತಿಸಿದ್ದ ಹಿನ್ನೆಲೆಯಲ್ಲಿ, ಪಿಎಚ್‌ಸಿ ಕಲ್ಲಡ್ಕ-ಬಾಳ್ತಿಲ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಈ ಶಿಬಿರವನ್ನು  ಆಯೋಜಿಸಿದ್ದರು.ಶಿಬಿರಕ್ಕಾಗಿ  ಡಿಜಿಟಲ್ ಚೇಸ್ಟ್ ಎಕ್ಸ್-ರೇ ಸೌಲಭ್ಯವನ್ನು  ದಕ್ಷಿಣ ಕನ್ನಡ  ಜಿಲ್ಲಾ ಕ್ಷಯರೋಗ ಕೇಂದ್ರದ ಮೂಲಕ ಒದಗಿಸಲಾಗಿತ್ತು.

ಶಿಬಿರದಲ್ಲಿ ಒಟ್ಟು 102 ಮಂದಿ ತಪಾಸಣೆಗೊಳಗಾದರು.
ಕಲ್ಲಡ್ಕ-ಬಾಳ್ತಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಎಚ್‌ಒಗಳು,ತಾಲೂಕು ಆರೋಗ್ಯ ಕಚೇರಿಯ  ಟಿಬಿ ಮೇಲ್ವಿಚಾರಕರು,ಜಿಲ್ಲಾ ತಂಡದ ರೇಡಿಯೋಗ್ರಫಿ ಇಮೇಜಿಂಗ್ ಅಧಿಕಾರಿಗಳು, ಗ್ರಾಮ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು,  ಭಾಗವಹಿಸಿದ್ದರು. 

By Suddi9

Leave a Reply

Your email address will not be published. Required fields are marked *