ಗುರುಪುರ : ಗ್ರಾಮೀಣ ಅಭಿವೃದ್ಧಿಯಲ್ಲಿ ಹಣಕಾಸು ಸೊಸೈಟಿಗಳ ಪಾತ್ರ ದೊಡ್ಡದಿದೆ. ಮೂಡುಪೆರಾರ ವಿವಿದ್ಧೋದ್ದೇಶ ಸಹಕಾರಿ ಸಂಘವು ಕಳೆದ ೫೦ ವರ್ಷಗಳಿಂದ ಅಂತಹ ಕೆಲಸ ಮಾಡುತ್ತ ಬಂದಿದೆ ಎಂಬುದು ನಿಜಕ್ಕೂ ಹೆಮ್ಮೆಯ ವಯ. ಸಂಘದ ಸವಲತ್ತು ಅರ್ಹರಿಗೆ ಅಗತ್ಯಾನುಸಾರಿ ಸಿಗುವಂತಾಗಲಿ ಎಂದು ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.

ಕಿನ್ನಿಕಂಬಳದಲ್ಲಿ ಮಾ. ೨೯ರಂದು ಮೂಡುಪೆರಾರ ವಿವಿದ್ಧೋದ್ದೇಶ ಸಹಕಾರಿ ಸಂಘದ ನವೀಕೃತ ಕಟ್ಟಡ ಹಾಗೂ ಕಟ್ಟಡದಲ್ಲಿ ಪ್ರಥಮ ಅಂತಸ್ತಿನಲ್ಲಿ ಸ್ಥಾಪಿಸಲಾದ ಮೂರ್ತೆದಾರರ ಸೇವಾ ಸಹಕಾರಿ ಸಂಘ(ನಿ) ಮೂಡುಪೆರಾರ ಇದರ ಪ್ರಥಮ ಶಾಖೆಯ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಇಂತಹ ಹಣಕಾಸು ಸಂಸ್ಥೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ವ್ಯವಹಾರ ನಡೆಸುತ್ತಿವೆ. ವ್ಯವಹಾರದಲ್ಲಿ `ಹಣಕಾಸಿನ ಶಿಸ್ತು’ ಅತ್ಯಗತ್ಯ. ಸಂಘಗಳಲ್ಲಿ ಮಹಿಳಾ ಉದ್ಯೋಗಿಗಳು ಹೆಚ್ಚಿರುವುದರಿಂದ ಸಾಲ ಮರುಪಾವತಿ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಗ್ರಾಮಗಳಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಅವಕಾಶವಿರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮೂಡುಪೆರಾರ ವಿವಿದ್ಧೋದ್ದೇಶ ಸಹಾಕಾರಿ ಸಂಘ ಕಿನ್ನಿಕಂಬಳ ಮತ್ತು ಮೂರ್ತೆದಾರರ ಸೇವಾ ಸಹಕಾರಿ ಸಂಘ ಮೂಡುಪೆರಾರ ಇದರ ಅಧ್ಯಕ್ಷ ಗಣೇಶ್ ಪೂಜಾರಿ ಮಾತನಾಡಿ, ತನ್ನ ತಂದೆ ನಾರಾಯಣ ಪೂಜಾರಿ ಅವರು ೫೦ ವರ್ಷಗಳ ಹಿಂದೆ ಸಮಾನ ಮನಸ್ಕರೊಂದಿಗೆ ಕೂಡಿಕೊಂಡು ಈ ಸಂಘ ಸ್ಥಾಪಿಸಿದ್ದರು. ಇದುವರೆಗಿನ ೧೦ ಅವಧಿಯಲ್ಲಿ ಚುನಾವಣೆ ಇಲ್ಲದೆ, ಸಂಘದ ಆಡಳಿತ ಮಂಡಳಿ ಗಟ್ಟಿಯಾಗಿ ನೆಲೆನಿಂತಿದೆ. ಸಂಘದ ಬೆಳವಣಿಗೆಯಲ್ಲಿ ಊರವರ ಸಹಕಾರ ಮರೆಯುವಂತಿಲ್ಲ. ಮುಂದಿನ ದಿನಗಳಲ್ಲಿ ಸಂಘದ ಮೂಲಕ ಬಡ ಕುಟುಂಬಗಳ ಶವ ಸಂಸ್ಕಾರಕ್ಕೆ ನೆರವಾಗುವ ಯೋಜನೆ ಹಮ್ಮಿಕೊಂಡಿದ್ದೇವೆ ಎಂದರು ಹೇಳಿದರು.

ಮಾಜಿ ಜಿಂಪ ಸದಸ್ಯರಾದ ಕೃಷ್ಣ ಅಮೀನ್, ಜನಾರ್ದನ ಗೌಡ, ಮೂಡುಪೆರಾರ ಗ್ರಾಪಂ ನಿಕಟಪೂರ್ವ ಅಧ್ಯಕ್ಷೆ ಮೀನಾಕ್ಷಿ ಗೌಡ, ದ.ಕ ಜಿಲ್ಲಾ ಮೂರ್ತೆದಾರರ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ, ಗ್ರಾಪಂ ಸದಸ್ಯ ಫಾಸ್ಕಲ್ ಫೆರ್ನಾಂಡಿಸ್, ಉದಯ ಭಟ್ ಕಿನ್ನಿಕಂಬಳ, ಬಿಲ್ಲವರ ಮಹಾಮಂಡಲ ಅಧ್ಯಕ್ಷ ಸೂರ್ಯಕಾಂತ ಜೆ. ಸುವರ್ಣ, ಗುರುಕಂಬಳ ಜಾಮಿಯಾ ಮಸೀದಿಯ ಫಯಾಝ್ ಅಹ್ಮದ್ ಪಟೇಲ್ ಶುಭ ಹಾರೈಸಿದರು. ಸಂಘದ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ನಿರ್ದೇಶಕರ ಸಹಿತ ಸಹಕರಿಸಿದ ಹಲವರನ್ನು ಸ್ಮರಣಿಕೆ ನೀಡಿ ಶಾಲು ಹೊದಿಸಿ ಗೌರವಿಸಲಾಯಿತು.
ಸುಚಿತಾ ಡಿ. ಸ್ವಾಗತಿಸಿದರು. ಜಿಲ್ಲಾ ಮೂರ್ತೆದಾರರ ಸಂಘದ ಕಿಶೋರ್ ಕುಮಾರ್, ವನಿತಾ, ರೆಜಿನಾ ಮೇರಿ, ಮೋನಪ್ಪ ಪೂಜಾರಿ, ರತ್ನಾಕರ ಶೆಟ್ಟಿ, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ನಾಸಿರ್ ಹುಸೇನ್ ಮತ್ತಿತರರು ಉಪಸ್ಥಿತರಿದ್ದರು. ವಿವಿದ್ಧೋದ್ದೇಶ ಸಂಘದ ಕಾರ್ಯದರ್ಶಿ ಹರೀಶ್ ವರದಿ ಮಂಡಿಸಿದರು. ನವೀನ್ ಕುಮಾರ್ ಪೆರಾರ ನಿರೂಪಿಸಿದರು. ಮೂಡುಪೆರಾರ ಮೂರ್ತೆದಾರರ ಸಂಘದ ಉಪಾಧ್ಯಕ್ಷ ವಿನೋಧರ ಪೂಜಾರಿ ವಂದಿಸಿದರು.
