ಬಂಟ್ವಾಳ: ಶ್ರೀರಾಮ ವಿದ್ಯಾಕೇಂದ್ರದ ಸುಂದರ ಪ್ರಕೃತಿಯ ಮಡಿಲಲ್ಲಿ ಶ್ರೀರಾಮ ಶಿಶುಮಂದಿರ ಮತ್ತು ಶ್ರೀರಾಮ ಪೂರ್ವ ಗುರುಕುಲದ ೧ ಮತ್ತು ೨ ನೇ ತರಗತಿಯ ಮಕ್ಕಳ ವಾರ್ಷಿಕೋತ್ಸವ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೇ ಸರಸಂಘಚಾಲಕ ಗುರೂಜಿಯವರ ಜನ್ಮದಿನದ ಪ್ರಯುಕ್ತ ಸಾಮರಸ್ಯ ಸಹಭೋಜನ ಕಾರ್ಯಕ್ರಮ ಶ್ರೀರಾಮ ಶಿಶುಮಂದಿರದ ಆವರಣದಲ್ಲಿ ನಡೆದಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿದ್ದಕಟ್ಟೆ ಪ್ರಥಮದರ್ಜೆ ಕಾಲೇಜಿನ ಡಾ. ಸುಮನಾ ಶೆಟ್ಟಿ ಮಕ್ಕಳ ನೃತ್ಯ ಮತ್ತು ಸಂಘ ಶತಾಬ್ದಿಯ ಪ್ರಯುಕ್ತ ಮಾಡಿದ ಕಿರು ನಾಟಕವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಆಂಗ್ಲ ಭಾಷೆಯತ್ತ ಒಲವನ್ನು ತೋರುತ್ತಿರುವ ಈ ಸಮಯದಲ್ಲಿ ಸಂಸ್ಕೃತವನ್ನು ಕಲಿಯುತ್ತಿರುವುದು ಅಭಿನಂದನೀಯವಾಗಿದೆ ಎಂದರು.
ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮತ್ತು ಅಧ್ಯಕ್ಷರಾದ ನಾರಾಯಣ ಸೋಮಯಾಜಿ ಉಪಸ್ಥಿತರಿದ್ದರು.

ಸಹಭೋಜನಕ್ಕೆ ಮಕ್ಕಳ ಮನೆಯಿಂದಲೇ ಮಾಡಿದ ಅನ್ನ, ಪಾಯಸ ಮತ್ತು ಕೊಬ್ಬರಿ ಮಿಠಾಯಿಯನ್ನು ತಾಯಂದಿರು ತಯಾರಿಸಿ ಕಳುಹಿಸಿ ಕೊಟ್ಟಿದ್ದರು. ೬೦೦ ಮಂದಿ ಸಹಭೋಜನವನ್ನು ಸವಿದರು. ೧೦೪ ಮನೆಗಳಿಂದ ಕೊಬ್ಬರಿ ಮಿಠಾಯಿ, ೮೪ ಮನೆಗಳಿಂದ ಅನ್ನ, ೯೮ ಮನೆಗಳಿಂದ ಪಾಯಸ, ಒಟ್ಟು ೨೮೬ ಮನೆಗಳಿಂದ ತಾಯಂದಿರು ಭೋಜನ ಪದಾರ್ಥಗಳನ್ನು ತಯಾರಿಸಿಕೊಟ್ಟು ಸಹಕರಿಸಿದರು. ಮಾತೃಭಾರತಿಯ ಸದಸ್ಯರಾದ ಶ ನೇತ್ರಾವತಿ ಕಾರ್ಯಕ್ರಮ ನಿರ್ವಹಿಸಿದರು, ಶ್ರೀರಾಮ ಪ್ರಾಥಮಿಕ ಶಾಲೆಯ ರಾಜೇಶ್ವರಿ ಮಾತಾಜಿ, ಶ್ರೀ ಗುರೂಜಿ ಮತ್ತು ಸಾಮರಸ್ಯ ಸಹಭೋಜನದ ಬಗ್ಗೆ ಮಾಹಿತಿ ನೀಡಿದರು. ಭಗಿನಿ ದೇವಕಿ ಮಾತಾಜಿ ಪ್ರೇರಣಾ ಗೀತೆ ಹಾಡಿದರು, ಶಿಶುಮಂದಿರದ ಪುಟಾಣಿ ಅನಘ ಸ್ವಾಗತಿಸಿ, ವಂಶಿಕಾ ವಂದಿಸಿದಳು.
