ಬಂಟ್ವಾಳ: ತಾಲೂಕಿನ ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂದೂ ರುದ್ರ ಭೂಮಿಯಲ್ಲಿ ಪಂಚಾಯತ್ ನ 15ನೇ ಹಣಕಾಸು ನಿಧಿಯಲ್ಲಿ ನಿರ್ಮಾಣಗೊಂಡಿರುವ  ರುದ್ರ ಶಿವ ಹಾಗೂ ಸತ್ಯ ಹರಿಶ್ಚಂದ್ರ ಮೂರ್ತಿಯನ್ನು ಅನಾವರಣಗೊಳಿಸಲಾಯಿತು.
ಇದೇ ವೇಳೆ ನೂತನ ಕೊಠಡಿಯ ಉದ್ಘಾಟನೆ,ಎಪಿಎಂಸಿ ಮತ್ತು  ಪಂಚಾಯತ್ ನಿಧಿಯಲ್ಲಿ ಸಿದ್ಧಕಟ್ಟೆ ಮಾರುಕಟ್ಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡ  ಸುಸಜ್ಜಿತವಾದ ಮೀನು ಮಾರುಕಟ್ಟೆಯನ್ನು  ಬಂಟ್ವಾಳ  ಶಾಸಕರಾದ  ರಾಜೇಶ್ ನಾಯ್ಕ್ ಉಳಿಪಾಡಿ ಅವರು  ಉದ್ಘಾಟಿಸಿ,ಲೋಕಾರ್ಪಣೆಗೊಳಿಸಿದರು. 

ಈ ಸಂಧರ್ಭದಲ್ಲಿ ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ  ರಾಜೀವಿ ಉಪಾಧ್ಯಕ್ಷರಾದ  ಸುರೇಶ್ ಕುಲಾಲ್, ಸದಸ್ಯರುಗಳಾದ  ಸತೀಶ್ ಪೂಜಾರಿ, ಸಂದೇಶ ಶೆಟ್ಟಿ, ಉದಯ ಪೂಜಾರಿ, ಸುನೀಲ್ ಶೆಟ್ಟಿಗಾರ್, ದೇವಪ್ಪ ಕರ್ಕೇರ, ದಾಮೋದರ ಪೂಜಾರಿ,  ಬೆನಾಡಿಕ್ಟ ಡಿಕೋಸ್ತ, ಶಕುಂತಲಾ, ಶಾಂತ, ವಿಮಲಾ ಮೋಹನ್, ಪ್ರೇಮ,  ವಿದ್ಯಾ, ಹೇಮಲತಾ ಹಾಗೂ ಮಾಜಿ ತಾಲೂಕು ಸದಸ್ಯ ರತ್ನ ಕುಮಾರ್ ಚೌಟ, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು,  ನಿರ್ದೇಶಕರಾದ ವಿಶ್ವನಾಥ್ ಶೆಟ್ಟಿಗಾರ್, ಶಿವ ಗೌಡ, ವೃತ್ತಿಪರ ನಿರ್ದೇಶಕರಾದ ನವೀನ್ ಹೆಗ್ಡೆ, ಸ್ಥಳೀಯರಾದ ದೀಪಕ್ ಶೆಟ್ಟಿಗಾರ್, ಉದಯ ಶೆಟ್ಟಿಗಾರ್, ಪ್ರವೀಣ್ ಹೆಗ್ಡೆ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ  ಪದ್ಮಾ, ಕಾರ್ಯದರ್ಶಿ  ರೋಹಿಣಿ, ಪಂಚಾಯತ್ ಸಿಬ್ಬಂದಿಗಳು,ಎನ್ ಆರ್ ಎಲ್ ಎಂ ನ ಸದಸ್ಯರುಗಳು ಉಪಸ್ಥಿತರಿದ್ದರು. ಪ್ರಜ್ವಲ್ ಎ ಸಿದ್ಧಕಟ್ಟೆ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು 

By suddi9

Leave a Reply

Your email address will not be published. Required fields are marked *