ಬಂಟ್ವಾಳ: ಇಲ್ಲಿನ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ 201 ವರ್ಷದ ಬ್ರಹ್ಮರಥೋತ್ಸವವು ಫೆ.20 ರಿಂದ 25 ರ ತನಕ ನಡೆಯುವ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

ಫೆ.20 ಧ್ವಜಾರೋಹಣ , ಬೆಳ್ಳಿ ಪಾಲ್ಕಿ ಹಗಲೋತ್ಸವ, ಗರುಡೋತ್ಸವ ,ವಸಂತ ಪೂಜೆ,ಫೆ.
21 ರಂದು ಬೆಳ್ಳಿ ಪಾಲ್ಕಿ ಹಗಲೋತ್ಸವ , ಹನುಮಂತೋತ್ಸವ , ವಸಂತ ಪೂಜೆ,ಫೆ.
22 ರಂದು ಬೆಳ್ಳಿ ಲಾಲ್ಕಿ ಹಗಲೋತ್ಸವ, ಚಂದ್ರಮಂಡಲ ಉತ್ಸವ , ಮರದ ಲಾಲ್ಕಿ ಉತ್ಸವ, ವಸಂತ ಪೂಜೆ,ಫೆ.23 ರಂದು ಶ್ರೀ ದೇವರ ಮೂಲ ಪ್ರತಿಷ್ಠಾ ವರ್ದಂತಿ, ಬೆಳ್ಳಿ ಪಾಲ್ಕಿ ಹಗಲೋತ್ಸವ, ಜಲ ಕ್ರೀಡೆ, ಗೋಪುರೋತ್ಸವ, ಬೆಳ್ಳಿ ಲಾಲ್ಕಿ ಉತ್ಸವ, ಬೆಳ್ಳಿ ರಥೋತ್ಸವ, ವಸಂತ ಪೂಜೆ
ಫೆ.24 ರಂದು ಶ್ರೀ ಬ್ರಹ್ಮ ರಥೋತ್ಸವ , ವಸಂತ ಪೂಜೆ, ಏಕಾಂತ ಸೇವೆ, ಫೆ.25 ರಂದುದ್ವಾರ ಪೂಜೆ, ಚೂರ್ಣೋತ್ಸವ,ಅವಂಭೃತ ಉತ್ಸವ, ನದಿಸ್ನಾನ ಧ್ವಜಾವರೋಹಣ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ವಾಹನ ನಿಲುಗಡೆಗೆ ವ್ಯವಸ್ಥೆ
ರಥೋತ್ಸವದ ಹಿನ್ನಲೆಯಲ್ಲಿ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು,ಭಕ್ತರು ಸಹಕರಿಸುವಂತೆ ಕೋರಲಾಗಿದೆ.
ಮಂಗಳೂರು, ಪುತ್ತೂರು, ಉಪ್ಪಿನಂಗಡಿ ಕಡೆಯಿಂದ ಬರುವವರು
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂಬದಿಯ ಜಾಗದಲ್ಲಿ ಹಾಗೂದೇವಳದ ಸಮೀಪ ಇರುವ ಶಾಲಾ ರಸ್ತೆಯ ಮೂಲಕ ಎಸ್ ವಿ ಎಸ್ ದೇವಳದ ವಿದ್ಯಾ ಸಂಸ್ಥೆಯ ವಠಾರದಲ್ಲಿ ನಿಲುಗಡೆ ಗೊಳಿಸಬೇಕು
ಮೂಡಬಿದರೆ , ಕಾರ್ಕಳ, ಕಡೆಯಿಂದ ಬರುವ ವಾಹನಗಳು ದೇವರಕಟ್ಟೆಯ ಬಸ್ ನಿಲ್ದಾಣದಲ್ಲಿ ಹಾಗೂ ಅದರ ಎದುರಿನ ವಿಶಾಲ ಮೈದಾನದಲ್ಲಿ ವಾಹನವನ್ನು ನಿಲುಗಡೆಗೊಳಿಸಬೇಕು
ಪುಂಜಾಲ್ ಕಟ್ಟೆ, ಗುರುವಾಯನಕೆರೆ, ಬೆಳ್ತಂಗಡಿ ಉಜಿರೆ ಕಡೆಯಿಂದ ಬರುವ ಭಕ್ತಾದಿಗಳು ಜಕ್ರಿಬೆಟ್ಟಿನಿಂದ ಬಂಟ್ವಾಳ ಪೇಟೆಯ ರಸ್ತೆ ಯಿಂದ ಕೊಟ್ರಮಣಗಂಡಿ ಮೂಲಕ ದೇವರಕಟ್ಟೆಯ ಬಸ್ ನಿಲ್ದಾಣ ಹಾಗೂ ಅದರ ಎದುರಿನ ವಿಶಾಲ ಮೈದಾನದಲ್ಲಿ ನಿಲುಗಡೆಗೊಳಿಸುವಂತೆ ದೇವಳದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ಕೋರಿದೆ.
ರಥೋತ್ಸವದ ಐದು ದಿನಗಳಲ್ಲಿ ದ್ವಿಚಕ್ರ ವಾಹನ ಸವಾರರು ತಮ್ಮ ವಾಹನವನ್ನು ಎಲ್ಲೆಂದರಲ್ಲಿ ನಿಲ್ಲಿಸುವ ಬದಲು ಮೇಲೆ ತಿಳಿಸಿದ ಸ್ಥಳದಲ್ಲಿ ನಿಲ್ಲಿಸಬೇಕು.ಅದೇರೀತಿ ಬಂಟ್ವಾಳ ಅಂಚೆ ಕಚೇರಿಯಿಂದ ಆಫೀಸ್ನಿಂದ ರಥಬೀದಿಯ ಭಾಮಿ ಜಂಕ್ಷನ್ ವರೆಗೆ ರಸ್ತೆಯ 2 ಬದಿಯಲ್ಲಿ ಯಾವುದೇ
