ಬಂಟ್ವಾಳ: ಮಣಿನಾಲ್ಕೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಸರಪಾಡಿ ಇದರಲ್ಲಿ ಕ್ಯಾಂಪ್ಕೋ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ ಮತ್ತು ಬೆಳೆಗಾರರ ಸಭೆ  ನಡೆಯಿತು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತರ ಉದ್ಯೋಗಗಳಿಗಿಂತ ಕೃಷಿ ಕಾರ್ಯ ಉತ್ತಮವಾಗಿದ್ದು, ಇದರ ಜತೆ ಉಪ ಕಸುಬು ನಡೆಸಿದಾಗ ಉತ್ತಮ ಆದಾಯ ಗಳಿಸಬಹುದು ಎಂದು ಹೇಳಿದರು.
ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್ . ಸತೀಶ್ಚಂದ್ರ ಅವರು ನೂತನ ಅಡಿಕೆ ಖರೀದಿ ಕೇಂದ್ರವನ್ನು ಉದ್ಘಾಟಿಸಿ, ಬಳಿಕ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯಲ್ಲಿ ಖರೀದಿ, ಪಾವತಿ ಪಾರದರ್ಶಕ ವ್ಯವಸ್ಥೆಯಿದ್ದು, ಗ್ರಾಮಸ್ಥರು ಸದುಪಯೋಗಡಿಸಿಕೊಳ್ಳಬೇಕು. ಸಂಘದಲ್ಲಿ ಪ್ರತೀದಿನ ಅಡಿಕೆ ಮತ್ತಿತರ ಉತ್ಪನ್ನಗಳ ಖರೀದಿಸುವ ವ್ಯವಸ್ಥೆ ನಡೆಸುವ ಚಿಂತನೆ ಇದೆ ಎಂದರು.
ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಸತ್ಯನಾರಾಯಣ ಅವರು ಕ್ಯಾಂಪ್ಕೋ ಕಾರ್ಯ ಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು.
ಕ್ಯಾಂಪ್ಕೋ ಉಪಾಧ್ಯಕ್ಷ ಪದ್ಮರಾಜ್ ಪಟ್ಟಾಜೆ,ಮಣಿನಾಲ್ಕೂರು ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಮಯ್ಯ,
ಉಪಾಧ್ಯಕ್ಷ ಗಿರಿಧರ್ ನಾಯ್ಕ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯಶೋಧರ ಗೌಡ, ಕ್ಯಾಂಪ್ಕೋ ನಿರ್ದೇಶಕರಾದ ಎಂ.ಮಹೇಶ್ ಚೌಟ, ಸತೀಶ್ಚಂದ್ರಭಂಡಾರಿ, ವಿವೇಕಾನಂದ ಗೌಡ, ಸದಾನಂದ ಶೆಟ್ಟಿ, ಗಣೇಶ್ ಪಾರಕಟ್ಟೆ, ಸೌಮ್ಯ ಪ್ರಕಾಶ್, ಗಣೇಶ್, ಮಣಿನಾಲ್ಕೂರು ಸಂಘದ ನಿರ್ದೇಶಕರಾದ , ಪೂವಪ್ಪ ಪೂಜಾರಿ,ಗೋಪಾಲ ಶೆಟ್ಟಿ , ಸುಧಾಕರ ಶೆಟ್ಟಿ ಎಚ್., ದಯಾನಂದ ಶೆಟ್ಟಿ, ವಿಶ್ವನಾಥ ನಾಯ್ಕ, ವಿಶ್ವನಾಥ ಪೂಜಾರಿ, ನಿಶಾಂತ್ ಕುಮಾರ್ ಶೆಟ್ಟಿ, ಕೃಷ್ಣಪ್ಪ, ಕುಶಾಲಾಕ್ಷಿ, ವಸಂತಿ, ತಿಲಕ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ನಡೆದ ಬೆಳೆಗಾರರ ಸಭೆಯಲ್ಲಿ ಬಂಟ್ವಾಳ ತೋಟಗಾರಿಕಾ ಇಲಾಖೆಯ ಹಿರಿಯ ತೋಟಗಾರಿಕಾ ನಿರ್ದೇಶಕ ಜೋ ಪ್ರದೀಪ್ ಡಿಸೋಜ ಅವರು ಎಲೆ ಚುಕ್ಕಿ ರೋಗ ಅದರ ನಿರ್ವಹಣೆ ಕುರಿತು ಮತ್ತು ಕ್ಯಾಂಪ್ಕೋ ಕೃಷಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಎನ್.ಆರ್. ಅವರು ಅಡಿಕೆ ತೋಟ ಪೋಷಣೆ ಬಗ್ಗೆ ಮಾಹಿತಿ ನೀಡಿದರು. ರೈತರ ಪ್ರಶ್ನೆಗಳಿಗೆ ಕ್ಯಾಂಪ್ಕೋ ವತಿಯಿಂದ ಮಾಹಿತಿ ನೀಡಲಾಯಿತು.ಇದೇ ವೇಳೆ ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್ . ಸತೀಶ್ಚಂದ್ರಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಂಘದ ನಿರ್ದೇಶಕ ಎನ್.ಧನಂಜಯ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ಪದ್ಮರಾಜ ಪಟ್ಟಾಜೆ ವಂದಿಸಿದರು. ಕ್ಯಾಂಪ್ಕೋ ರೀಜನಲ್ ಮ್ಯಾನೇಜರ್ ನಿತಿನ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *