
ಬಂಟ್ವಾಳ:ತಾಲೂಕಿನ ಬಾಳ್ತಿಲ ಗ್ರಾಮದ ಕಶೆಕೋಡಿ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಜಾತ್ರಾಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಬ್ರಹ್ಮ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವೈಧಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಂದಿಗೆ ಫೆ.3 ರಿಂದ 7 ರವರೆಗೆ ನಡೆಯಲಿದೆ ಎಂದು ದೇವಳದ ಆಡಳಿತ ಮೊಕ್ತೇಸರರಾದ ಸುಧಾಕರ ಶೆಣೈ ಮರೋಳಿ ತಿಳಿಸಿದ್ದಾರೆ. ಶುಕ್ರವರಾ ಬಂಟ್ವಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರುದೇವಸ್ಥಾನ ಕುಡಾಳ್ ದೇಶಸ್ಥ ಅಧ್ಯಗೌಡ್ ಬ್ರಾಹ್ನಣ ಸಮಾಜಕ್ಕೆ ಸೇರಿದ್ದರೂ,ಸಮಸ್ತ ಹಿಂದೂ ಸಮಾಜ ಇಲ್ಲಿನ ಜಾತ್ರಾಮಹೋತ್ಸವ ಸಹಿತ ಇತರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತುಷ್ಠುರಾಗುತ್ತಾರೆ ಎಂದರು. ಜಾತ್ರಾಮಹೋತ್ಸವದ ಪ್ರಯುಕ್ತ ಫೆ.3 ರಂದುಬೆಳಿಗ್ಗೆ ವೈಧಿಕ ವಿಧಿ ವಿಧಾನಗಳ ಬಳಿಕ ಧ್ವಜಾರೋಹಣ,ಮಧಗಯಾಹ್ನ ಮಹಾಪೂಜೆ,ಸಂಜೆ ಭಜನೆ,ರಾತ್ರಿಪಲ್ಲಕಿ ಉತ್ಸವ,ದೇವರ ಸವಾರಿ ಸಾಂಸ್ಕೃತಿಕಕಾರ್ಯಕ್ರಮದ ಅಂಗವಾಗಿ ಯುವಕಲಾವರ್ಧಿನಿಪ್ರಶಸ್ರಿ ವಿಜೇತೆ ಧನುಶ್ರೀ ಪ್ರಭು ಮತ್ತುತಂಡದಿಂದ ಭರತನಾಟ್ಯ ಕಾರ್ಯಕ್ರಮ ಜರಗಲಿದೆ. ಫೆ.4 ರಂದು ಬೆಳಿಗ್ಗೆ ವೈಧಿಕ ವಿಧಿ ವಿಧಾನ,ಮಧ್ಯಾಹ್ನ ಮಹಾಪೂಜೆ,ಸಂಜೆ ಭಜನೆ,ರಾತ್ರಿ ದೇವರ ಬಲಿ,ಲಟ್ಟೆಪೂಜೆ,ರಾತ್ರಿ ಮಂಗಳೂರು ಸನಾತನ ನಾಟ್ಯಾಲಯದಿಂದ ರಾಷ್ಟ್ರ ಮತ್ತು ಧರ್ಮಜಾಗೃತಿಯ ನೃತ್ಯ ವೈಭವ ನಡೆಯಲಿದೆ ಎಂದರು. ಫೆ.5 ರಂದು ಬೆಳಿಗ್ಗೆ ವೈಧಿಕ ವಿಧಿ ವಿಧಾನಧಗಯಾಹ್ನ ಮಹಾಪೂಜೆ,ಸಂಜೆ ಭಜನೆ ರಾತ್ರಿ ದೆರವರ ಬಲಿ,ಲಾಲಕಿ ಉತಗಸವ,ನೃತ್ಯ ಬಲಿ ವಸಂತಕಟ್ಟೆ ಪೂಜೆ ನಡೆಯಲಿದೆ ಎಂದರು.
ಬ್ರಹ್ಮರಥೋತ್ಸವ ;
ಪೆ. 6 ರಂದು ಬೆಳಿಗ್ಗೆ ವೈಧಿಕ ವಿಧಿ ವಿಧಾನ,ದೇವರ ಬಲಿ ಉತಗಸವ,ದರ್ಶನ ಬಲಿ,ರಥಕಲಶಾಭಿಷೇಕ,ಮಧ್ಯಾಹ್ನ ಮಹಾಪೂಜೆ,ಸಂಜೆ ಭಜನೆ,ರಾತ್ರಿ ಶ್ರೀಭೂತ ಬಲಿ,ಬ್ರಹ್ಮರಥರೋಹಣ, ಸುಡುಮದ್ದು ಪ್ರದರ್ಶನ,ಬ್ರಹ್ಮರಥೋತ್ಸವ ನಡೆಯಲಿದೆ ಪೆ. 7 ರಂದು ಬೆಳಿಗ್ಗೆ ಕವಾಟ ಉದ್ಘಾಟನೆ,ಆರಾಟ ಬಲಿ,ಓಕುಳಿ,ಅವಭೃತ ಸ್ನಾನ,ರಾಜಾಂಗಣ ಪ್ರಸಾದ,ಧ್ವಜ ಅವರೋಹಣ ಮಧಗಯಾಹ್ನ ಮಹಾಊಜೆ,ಮಂತ್ರಾಕ್ಷತೆ ರಾತ್ರಿ ಕ್ಷೇತ್ರದ ದೈಗಳಿಗೆ ನೇಮೋತ್ಸವ ನಡೆಯಲಿದೆ.ಜಾತ್ರಾಮಹೋತ್ಸವದ ಪ್ರತಿದಿನ ಅನ್ನಸಂತರ್ಪಣೆಯು ಇರುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿ ಶಾಂತರಾಮ ಶೆಣೈ, ಅಡಳಿತ ಮೊಕ್ತೇಸರರಾದ ರಾಜೀವ್ ಡಿ.ಎಸ್.ವೆಂಕಟ್ರಾಯ ಶೆಣೈ, ಡಾ.ವಿಜಯಲಕ್ಷ್ಮಿ ಉಪಸ್ಥಿತರಿದ್ದರು.
