
ಬಂಟ್ವಾಳ: ಲಯನ್ಸ್ ಇಂಟರ್ ನ್ಯಾಷನಲ್ ಪ್ರಾಂತ್ಯ-6ರ ಪ್ರಾಂತೀಯ ಸಮ್ಮಿಲನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಜ.31ರಂದು ಸಜೀಪಮೂಡ ಗ್ರಾಮದ ಕಂದೂರು ಬಜಾರ್ ಆಡಿಟೋರಿಯಂ ನಲ್ಲಿ ನಡೆಯಲಿದೆ ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಗಂಗಾಧರ ರೈ ತಿಳಿಸಿದರು. ಶುಕ್ರವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಮಾಣಿ ಲಯನ್ಸ್ ಕ್ಲಬ್ ನ ಆತಿಥ್ಯದಲ್ಲಿ ಪ್ರಾಂತ್ಯದ ಕ್ಲಬ್ ಸಹಕಾರದಲ್ಲಿ ಸೇವಾ ಸಾರ್ಥಕ್ಯ ಮಾಣಿಕ್ಯ ಹೆಸರಿನಲ್ಲಿ ಸಮ್ಮೇಳನ ನಡೆಯಲಿದೆ ಎಂದರು. ಸಾಮಾಜಿಕ ಸೇವೆಯಲ್ಲಿ ಸಾರ್ಥಕ್ಯ ಪಡೆದ ಹಿರಿಯರಾದ ಡಾ.ಗೋಪಾಲ ಆಚಾರ್ ಮಂಚಿ, ಬಾಲ ವಿಕಾಸ ಅಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕ ಪ್ರಹ್ಲಾದ ಶೆಟ್ಟಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪೀಟರ್ ಜೆರ್ರಿ ರೋಡ್ರಿಗಸ್, ವೈದ್ಯ ಡಾ.ಶ್ರೀನಾಥ್ ಆಳ್ವ ಪೆರಾಜೆಗುತ್ತು ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದರು.
ಲಯನ್ಸ್ ಕ್ಲಬ್ ಗಳ ಮೂಲಕ ಸಾಮಾಜಿಕ, ಆರೋಗ್ಯ, ಶೈಕ್ಷಣಿಕ, ಪರಿಸರ ಜಾಗೃತಿ ಕಾರ್ಯದಲ್ಲಿ ನಿರಂತರ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.ವಿದ್ಯಾರ್ಥಿಗಳ ವಿದ್ಯಾಭ್ಯಾಸ ,ಅನಾರೋಗ್ಯದಿಂದ ಸಂಕಷ್ಟಕ್ಕೆ ಒಳಗಾಗಿರುವ ದುರ್ಬಲರಿಗೆ ಆರ್ಥಿಕ ಸಹಕಾರ ನೀಡುತ್ತಿದೆ ಎಂದರು. ಮಾಣಿಯಲ್ಲಿ ಲಯನ್ಸ್ ಸೇವಾ ಟ್ರಸ್ಟ್ ಸ್ಥಾಪನೆಯಾಗಿದ್ದು ಸ್ವಂತ ನಿವೇಶನ ಖರೀದಿಸಿ ಲಯನ್ಸ್ ಭವನ ನಿರ್ಮಾಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಸಮ್ಮೇಳನವನ್ನು ಪೂರ್ವ ಜಿಲ್ಲಾಗವರ್ನರ್ ಎಸ್ .ಸಂಜೀವ ಶೆಟ್ಟಿ ಉದ್ಘಾಟಿಸಲಿದ್ದು,ಸಮ್ಮಿಲನದ ಪ್ರಾಂತಿಒಯ ಅಧ್ಯಕ್ಷ ಲಯನ್ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.ಅಧ್ಯಾಪಕ ವಿಠಲ ನಾಯಕ್ ಕಲ್ಲಡ್ಕ ದಿಕ್ಕೂಚಿ ಭಾಷಣ ಮಾಡಲಿದ್ದಾರೆ.ಇದಕ್ಕು ಮೊದಲು ನೃತ್ಯ ವೈವಿಧ್ಯ ನಡೆಯಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಾಂತೀಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್,ಮಾಣಿ ಕ್ಲಬ್ ಅಧ್ಯಕ್ಷ ಜನಾರ್ದನ ಪೆರಾಜೆ, ಸಂಚಾಲಕರಾದ ಮದ್ವರಾಜ್ ಕಲ್ಮಾಡಿ ಉಪಸ್ಥಿತರಿದ್ದರು.
