ಬಂಟ್ವಾಳ: ಬಿ.ಸಿ.ರೋಡಿನಲ್ಲಿರುವ ತಾಲೂಕು ಆಡಳಿತ ಸೌಧದ  ಮುಂಭಾಗ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಕುಳಿತಿದ್ದ ಸ್ಥಳಕ್ಕೆ ಕತ್ತಲಾಗುತ್ತಿದ್ದಂತೆ ಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ಅವರು ಅಗಮಿಸಿ ಧರಣಿ ನಿರತರ ಅಹವಾಲು ಅಲಿಸಿದ್ದಾರೆ.ಫೆ.27 ರವರೆಗಿನ ಗಡುವು ನೀಡಿರುವ ಪ್ರತಿಭಟನಾಕಾರರು ಈ ದಿನದೊಳಗಾಗಿ ಬೇಡಿಕೆ ಈಡೇರದಿದ್ದರೆ ಮತ್ತೆ ಧರಣಿ ಸತ್ಯಾಗ್ರಹ ನಡೆಸುವ ಎಚ್ಚರಿಕೆಯನ್ನು ನೀಡಿ ಧರಣಿಯನ್ನು ವಾಪಾಸ್ ಪಡೆದಿದ್ದಾರೆ.
ಸ್ಥಪ್ರತಿಭಟನಾ ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಮಂಜುನಾಥ್ ಅವರು ಧೆಣಿ ನಿರತ
ಕೊರಗ ಸಮುದಾಯದ ಮನವಿ ಸ್ವೀಕರಿಸಿ ಈ ಕುರಿತಾಗಿ ಜಿಲ್ಲಾಧಿಕಾರಿ ಅವರೊಂದಿಗೆ   ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆಯಿತ್ತರು

 

 

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ.) ಕರ್ನಾಟಕ-ಕೇರಳ, ಕೊರಗ ಅಭಿವೃದ್ಧಿ ಸಂಘ ಬಂಟ್ವಾಳ ತಾಲೂಕು ಇವರ ಜಂಟಿ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನಲ್ಲಿ ಭೂರಹಿತ 18 ಕುಟುಂಬ  ಸಾಮೂಹಿಕವಾಗಿ ತಹಶೀಲ್ದಾರರಿಗೆ ದರ್ಖಾಸು ಅರ್ಜಿ ಸಲ್ಲಿಸಿದ್ದು, ಎರಡು ವರ್ಷಗಳಾದರೂ ಒಂದೇ ಒಂದು ಕುಟುಂಬಕ್ಕೆ ಹಕ್ಕಪತ್ರ ನೀಡಲು ಕ್ರಮ ಕೈಗೊಂಡಿಲ್ಲ ,ಸಮುದಾಯ ಭವನಕ್ಕೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಗೂಡಿನ ಬಳಿಯಲ್ಲಿ 11 ಎಕ್ರೆ ಜಮೀನು ಕಾದಿರಿಸಲಾಗಿದ್ದರೂ ಈ ಜಮೀನನ್ನು ಐ.ಟಿ.ಡಿ.ಪಿ.ಇಲಾಖೆ ಹೆಸರಿಗೆ ಆರ್ ಟಿಸಿ ಮಂಜೂರಾತಿಯಾಗಿರುವುದಿಲ್ಲ,ಪ್ಋಇ ಕುಟುಂಬಕ್ಕೆ ಎರಡೂವರೆ ಎಕ್ರೆ ಕೃಷಿ ಭೂಮಿ ಮಂಜೂರುಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸಿದ್ದರು.

ಕೊರಗ ಅಭಿವೃದ್ದಿ ಸಂಘಗಳ ಒಕ್ಕೂಟದ ಕರ್ನಾಟಕ – ಕೇರಳ ರಾಜ್ಯದ ಅಧ್ಯಕ್ಷೆ ಸುಶೀಲಾ ನಾಡ ಅವರು ತಹಶೀಲ್ದಾರ್ ಗೆ ಬೇಡಿಕೆಗಳ ಬಗ್ಗೆ ಮನವಿಸಲ್ಲಿಸಿ ಮನವರಿಕೆ ಮಾಡಿ ,ಶೀಘ್ರವಾಗಿ ಬಗೆಹರಿಸುವಂತೆ ಒತ್ತಾಯಿಸಿದರು. ಸಮಸ್ಯೆಗೆ ಸ್ಪಂದಿಸದಿದ್ದರೆ ಫೆ.27 ರಿಂದ ಮತ್ತೆ  ಅಹೋರಾತ್ರಿ ಧರಣಿ  ನಡೆಸುವುದಾಗಿ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ನವೀನ್ ,ಜಿಲ್ಲಾ ಸಂಯೋಜಕ ಕೆ. ಪುತ್ರನ್ ತಾಲೂಕು ಅಧ್ಯಕ್ಷ ರಮೇಶ್, ಮಹಿಳಾ ಅಧ್ಯಕ್ಷೆ ಲಲಿತಾ ,ಕಾರ್ಯದರ್ಶಿ ಶೀನಾ,ಪುತ್ತೂರು ಸಂಘದ ಸದಸ್ಯ ಬಾಬು, ಮತ್ರಿತರ ಸದಸ್ಯರುಗಳು ಹಾಜರಿದ್ದರು.

 

ಕೊರಗ ಸಮುದಾಯ ಇಡೀ ದಿನ ಧರಣಿ ನಿರತರಾಗಿದ್ದರೂ ಇವರ  ಸಮಸ್ಯೆಗಳನ್ನು ಅಲಿಸಲು ಯಾವೊಬ್ಬ ಜನಪ್ರತಿನಿಧಿಯಾಗಲಿ,ಪ್ರಭಾವಿ ರಾಜಕಾರಣಿಗಳಾಗಲೀ ಬರಲಿಲ್ಲ,ತಹಶೀಲ್ದಾರ್ ಅಥವಾ ಸಂಬಂಧಪಟ್ಟ ಇಲಾಖಾಧಿಕಾರಿಗಳು ಬಾರದಿದ್ದಲ್ಲಿ ಧರಣಿ ನಿರತ
ಪ್ರತಿಭಟನಾಕಾರರು ,ಸ್ಥಳದಲ್ಲೇ ಮಲಗಲು ಚಾಪೆ,ಊಟೋಪಚಾರಕ್ಕಾಗಿ ಗ್ಯಾಸ್ ಸಿಲೊಂಡರ್,ಪಾತ್ರೆಗಳ ಸಹಿತ ಸಕಲ ವ್ಯವಸ್ಥೆಯನ್ನೇ ಮಾಡಿಕೊಂಡಿದ್ದರು.

 
 

 

By Suddi9

Leave a Reply

Your email address will not be published. Required fields are marked *