
ಬಂಟ್ವಾಳ : ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿ.ಸಿ.ಟ್ರಸ್ಟ್ ರಿ. ಬಂಟ್ವಾಳ ತಾಲೂಕು ವ್ಯಾಪ್ತಿಯ ಸ್ವಸಹಾಯ ಸಂಘಗಳ ಸದಸ್ಯರಿಗೆ ತರಬೇತಿ ಕಾರ್ಯಗಾರವನ್ನು ನಡೆಸಲಾಯಿತು. ಬಂಟ್ವಾಳ ತಾಲೂಕು ಯೋಜನಾಧಿಕಾರಿಗಳಾದ
ಜಯಾನಂದ ಪಿ.ಅವರು ಉಧ್ಘಾಟಿಸಿ ಮಾತನಾಡಿ ಸಿಡ್ಬಿ ಕಾರ್ಯಕ್ರಮದಡಿ ಕಳೆದ 8 ವರ್ಷಗಳಲ್ಲಿ ತಾಲೂಕಿನಲ್ಲಿ ಒಟ್ಟು 247 ಸದಸ್ಯರಿಗೆ ಒಟ್ಟು 10.35 ಕೋಟಿ ಸಾಲ ವಿತರಿಸಲಾಗಿದ್ದು, ಸದಸ್ಯರು ಸ್ವ-ಉದ್ಯೋಗ ಮಾಡಿಕೊಂಡು ಸ್ವಾವಲಂಬನೆ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಉಡುಪಿ ಪ್ರಾದೇಶಿಕ ವಿಭಾಗದ ಸಿಡ್ಬಿ ಯೋಜನಾಧಿಕಾರಿಗಳಾದ ಪ್ರವೀಣ್ ಶಿಂಧೆ ರವರು ಸಿಡ್ಬಿ ಕಾರ್ಯಕ್ರಮ ಅನುಷ್ಠಾನದ ಬಗ್ಗೆ, ಬಡ್ಡಿದರ, ಬ್ಯಾಂಕ್ ಸಾಲ ಮಂಜೂರಾತಿ ಹಾಗೂ ಸ್ವ ಉದ್ಯೋಗಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಬಂಟ್ವಾಳ ತಾಲೂಕು ಆಡಳಿತ ಪ್ರಬಂಧಕರಾದ ನಿಸಾರ್ ಅಹಾಮ್ಮದ್. ಬಿ.ಸಿ.ರೋಡ್ ವಲಯ ಮೇಲ್ವಿಚಾರಕರಾದ ಗಿರೀಶ್.ಕೆ.ಡಿ. , ಸಿಡ್ಬಿ ಫಲಾನುಭವಿಗಳು ಮತ್ತು ಬಂಟ್ವಾಳ ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾರವರು ಉಪಸ್ಥಿತರಿದ್ದರು
