ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಬಂಟ್ವಾಳ ಮತ್ತು ರುಡ್ ಸೆಟ್ ಸಂಸ್ಥೆ ಉಜಿರೆ ಇದರ ಜಂಟಿ ಆಶ್ರಯದಲ್ಲಿ ಪ್ರಾಜೆಕ್ಟ್ ಉನ್ನತಿ ಯೋಜನೆಯಡಿ ನರೇಗಾ ಯೋಜನೆಯಲ್ಲಿ 60 ಮಾನವ ದಿನಗಳ ಕೆಲಸ ಪೂರೈಸಿದ ಫಲಾನುಭವಿಗಳಿಗೆ ನಡೆಯುತ್ತಿರುವ ತರಕಾರಿ ಮತ್ತು ನರ್ಸರಿ ನಿರ್ವಹಣೆ ತರಬೇತಿ ಭಾಗವಾಗಿ  ಬಂಟ್ವಾಳ  ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಒಡ್ಡೂರು ಫಾರ್ಮ್ ಗೆ ಭೇಟಿ ನೀಡಲಾಯಿತು.

ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಅಜಯ್, ಎನ್ಆರ್‌ಎಲ್ಎಂ ಜಿಲ್ಲಾ ವ್ಯವಸ್ಥಾಪಕರಾದ ಶಕುಂತಲಾ, ತಾಲೂಕು ಎನ್.ಆರ್.ಎಲ್.ಎಂ. ಕಾರ್ಯಕ್ರಮ ವ್ಯವಸ್ಥಾಪಕರಾದ ಸುಧಾ,  ಸಂಸ್ಥೆಯ ಸಿಬ್ಬಂದಿ ಕಾಶ್ಮೀರ್ ಡಿಸೋಜ, ತಾಲೂಕು ನರೇಗಾ ಐಇಸಿ ಸಂಯೋಜಕರಾದ ರಾಜೇಶ್ ಮತ್ತಿತರಿದ್ದರು.

By suddi9

Leave a Reply

Your email address will not be published. Required fields are marked *