ಬಂಟ್ವಾಳ:ತಾಲೂಕಿನ ಸಜಿಪಮುನ್ನೂರು ಗ್ರಾಮದ ಇಂದಿರಾ ನಗರ ಶ್ರೀ ಭದ್ರಕಾಳಿ ದೇವಸ್ಥಾನದ 50 ಲಕ್ಷ ರೂ .ವೆಚ್ಚದಲ್ಲಿ ಸಂಪರ್ಕರಸ್ತೆಯ ಕಾಮಗಾರಿಗೆ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಗುದ್ದಲಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದ ರಸ್ತೆಯ ಕಾಂಕ್ರೀಟಿನ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಮಗಾರಿ ವೇಳೆ ಗ್ರಾಮದ ಜನರ ಸಹಕಾರವಿದ್ದರೆ ಗುಣಮಟ್ಟದ ಉತ್ತಮ ರಸ್ತೆ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಬಿಜೆಪಿ ಪ್ರಮುಖರಾದ ಶ್ರೀಕಾಂತ್ ಶೆಟ್ಟಿ ಸಂಕೇಶ, ರವೀಂದ್ರ ಕಂಬಳಿ, ಪ್ರವೀಣ್ ಗಟ್ಟಿ, ಮಾಗಣೆ ತಂತ್ರಿಗಳಾದ ಎಂ. ಸುಬ್ರಹ್ಮಣ್ಯ ಭಟ್, ಸಜೀಪ ಮೂಡ ಗ್ರಾ.ಪಂ.ಮಾಜಿ ಅಧ್ಯಕ್ಷ ಶೋಬಿತ್ ಪೂಂಜಾ,ಜಿಲ್ಲಾ ಬಿಜೆಪಿ ಕಾರ್ಯದರ್ಶಿ ದೇವಪ್ಪ ಪೂಜಾರಿ, ಸಜೀಪ ಮುನ್ನೂರು ಮಹಾಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ರೂಪೇಶ್ ಆಚಾರ್ಯ, ಸ.ಮುನ್ನೂರು, ಗ್ರಾಮಪಂಚಾಯತ್ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷೆ ಸುಮತಿ ಖಂಡಿಗ,ವಿವೇಕ ಶೆಟ್ಟಿ ನಗ್ರಿಗುತ್ತು, ಗ್ರಾ.ಪಂ.ಸದಸ್ಯರುಗಳು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಗುದ್ದಲಿ ಪೂಜೆ;
ಸಜಿಪಮುನ್ನೂರು ಗ್ರಾಮದ ದಾಸರಗುಡ್ಡೆ ಶ್ರೀ ಕೊರಗಜ್ಜ ಸಾನಿಧ್ಯಕ್ಕೆ 10 ಲ.ರೂ.ವೆಚ್ಚದಲ್ಲಿ ಸಂಪರ್ಕರಸ್ತೆಗೆ ಕಾಂಕ್ರೀಟ್ ಕಾಮಗಾರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನ್ಯಾಕ್ ಉಳಿಪ್ಪಾಡಿಯವರು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಾನಿಧ್ಯದ ಪ್ರಧಾನರಾದ ಸಂತೋಷ್ ಕೋಟ್ಯಾನ್, ಗ್ರಾ.ಪಂ.ಅಧ್ಯಕ್ಷೆ ಅನಿತಾ,ಉಪಾಧ್ಯಕ್ಷೆ ಸುಮತಿ ಖಂಡಿಗ, ಜಿ.ಪಂ.ಮಾಜಿ ಸದಸ್ಯ ರವೀಂದ್ರ ಕಂಬಳಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಪೂಜಾರಿ, ಬಿಜೆಪಿ ಪ್ರಮುಖರಾದ ರೂಪೇಶ್ ಆಚಾರ್ಯ, ನವೀನ್ ಅಂಚನ್ ಪ್ರವೀಣ್ ಗಟ್ಟಿ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು
