ಮೂಡುಬಿದರೆ: ಮಿಸ್ ಸುಪ್ರಾ ನ್ಯಾಷನಲ್-2014 ಸ್ಪಧರ್ಾ ವಿಜೇತೆ, ಆಳ್ವಾಸ್ ಪಿಯು ಕಾಲೇಜಿನ 2010ರಲ್ಲಿ ವಿದ್ಯಾಥರ್ಿಯಾಗಿದ್ದ, ಆಶಾ ಭಟ್ ಅವರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸೋಮವಾರ ಸಂಜೆ ಸನ್ಮಾನಿಸಲಾಯಿತು.
ವಿದ್ಯಾಗಿರಿಯ ಸುಂದರಿ ಆನಂದ ಆಳ್ವಾ ಕ್ಯಾಂಪಸ್ನ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

miss asha

mbd_dec15_3 (1)

mbd_dec15_3 (2)

 

ಪ್ರತಿಯೊಬ್ಬರ ಜೀವನದಲ್ಲೂ ಉತ್ತಮ ಅವಕಾಶಗಳಿರುತ್ತವೆ. ಕಠಿಣ ಪರಿಶ್ರಮ ಆತ್ಮಸ್ಥೈರ್ಯದಿಂದ ಗೆಲುವು ಸಾಧ್ಯ. ತಾನು ಆಳ್ವಾಸ್ ಕಾಲೇಜಿನಲ್ಲಿದ್ದಾಗ ಕಲಿತ ಶಿಸ್ತು, ಪರಿಶ್ರಮ ತನ್ನ ಈ ಸಾಧನೆಗೆ ಪೂರಕವಾಗಿದೆ. ವಿದ್ಯಾಥರ್ಿಗಳು ವಿದ್ಯಾಥರ್ಿ ಜೀವನದಲ್ಲಿಯೇ ಕನಸ್ಸು ಕಟ್ಟುವ ಜತೆಗೆ ಅದನ್ನು ಪೂರೈಸುವ ಛಲ ಮತ್ತು ಬದ್ಧತೆ ಇದ್ದರೆ ಗೆಲುವಿನ ಬಾಗಿಲು ಸದಾ ತೆರೆದಿರುತ್ತದೆ. ತಾನು ಆಳ್ವಾಸ್ ಕಾಲೇಜಿನಲ್ಲಿದ್ದಾಗ ಎನ್ಸಿಸಿಯಲ್ಲಿದ್ದೆ ಇದರಿಂದಾಗಿ ತನಗೆ ಶಿಸ್ತು ಮತ್ತು ಪರಿಶ್ರಮ ನನ್ನಲ್ಲಿ ಬೆಳೆದಿದೆ. ನನ್ನ ಈ ಪ್ರಯಾಣದಲ್ಲಿ ಮೋಹನ ಆಳ್ವರ ಸಹಕಾರವೂ ಇದೆ ಎಂದು ಹೇಳಿದ ಆಶಾ ಭಟ್ ಆಳ್ವಾಸ್ ಸಂಸ್ಥೆಯು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ಅದರಲ್ಲಿ ಸಾಧಕರಿಗೆ ಸನ್ಮಾನ ಮಾಡುತ್ತಿದ್ದ ಸಂದರ್ಭದಲ್ಲಿ ಎದುರುಗಡೆಯ ವೇದಿಕೆಯಲ್ಲಿ ಕುಳಿತು ವೀಕ್ಷಿಸುತ್ತಿದ್ದ ತನಗೆ ತಾನೂ ಕೂಡಾ ಇಂತಹ ಸನ್ಮಾನವನ್ನು ಸ್ವೀಕರಿಸಬೇಕೆಂಬ ಆಸೆ ನನ್ನಲ್ಲಿ ಮೊಳಕೆಯೊಡೆದಿತ್ತು ಇದೀಗ ಆ ಅವಕಾಶ ಸಿಕ್ಕಿರುವುದಕ್ಕೆ ಸಂತಸವಾಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಾ.ಎಂ.ಮೋಹನ ಆಳ್ವ, ಕಾಲೇಜಿನಲ್ಲಿದ್ದಾಗ ಆಶಾ ಭಟ್ ಕಲಿಕೆ ಮತ್ತು ಎನ್ಸಿಸಿಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದರು. ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದ ಅವರನ್ನು ಪಿಯುಸಿಗೆ ದತ್ತು ಸ್ವೀಕಾರ ಯೋಜನೆಯಡಿ ಶಿಕ್ಷಣವನ್ನು ನೀಡಲಾಗಿದ್ದು ನಂತರ ಎನ್ಸಿಸಿಯಲ್ಲಿ ಉತ್ತಮ ಸಾಧನೆಯಲ್ಲಿ ಮಾಡಿರುವುದಕ್ಕೆ ದ್ವಿತೀಯ ಪಿಯುಸಿ ಶಿಕ್ಷಣವನ್ನು ಕೂಡಾ ಉಚಿತವಾಗಿ ನೀಡಲಾಗಿತ್ತು. ಕೊಲಂಬೋದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಎಸ್ಸಿಸಿ ಕೆಡೆಟ್ನಲ್ಲಿ ಭಾಗವಹಿಸಿ ದೇಶ ಮತ್ತು ಆಳ್ವಾಸ್ ಸಂಸ್ಥೆಗೆ ಹೆಸರನ್ನು ತಂದಿದ್ದರು ಎಂದು ಹೇಳಿದ ಅವರು ಆಶಾ ವಿದ್ಯಾಥರ್ಿಯಾಗಿದ್ದಾಗ ಉತ್ತಮ ಸಾಧನೆಯನ್ನು ಮಾಡುತ್ತಿದ್ದಾಗ ಈಕೆ ಭವಿಷ್ಯದಲ್ಲಿ ಮಿಲಿಟ್ರಿ ಅಥವಾ ಫೈಲಟ್ ಆಗಿ ದೇಶಕ್ಕೆ ಗೌರವವನ್ನು ತರುತ್ತಾಳೆ ಎಂದು ಭಾವಿಸಿದ್ದೆ ಆದರೆ ಇದೀಗ ಮಾಡೆಲ್ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುವ ಮೂಲಕ ದೇಶ, ರಾಜ್ಯ ಮತ್ತು ವಿದ್ಯೆ ಕಲಿತ ಶಿಕ್ಷಣ ಸಂಸ್ಥೆಗಳ ಹೆಸರನ್ನು ಗುರುತಿಸುವಂತೆ ಮಾಡಿದ್ದಾಳೆ ಇಂತಹ ಸಾಧನೆಗಳು ವಿದ್ಯಾಥರ್ಿಗಳಿಗೆ ಮಾದರಿಯಾಗಬೇಕೆಂದರು.
ಮಾಜಿ ಸಚಿವ, ಟ್ರಸ್ಟಿ ಕೆ.ಅಮರನಾಥ ಶೆಟ್ಟಿ, ಮೀನಾಕ್ಷಿ ಆಳ್ವ, ಜಯಕರ ಆಳ್ವ ಉಪಸ್ಥಿರಿದ್ದರು. ಉಪನ್ಯಾಸಕಿ ದೀಪಾ ಜಯಕರ ಕಾರ್ಯಕ್ರಮ ನಿರೂಪಿಸಿದರು

By suddi9

Leave a Reply

Your email address will not be published. Required fields are marked *