ಬಂಟ್ವಾಳ: ಸಮಾಜದ ಬೆಳವಣಿಗೆಗೆ ನಕರಾತ್ಮಕ ಪ್ರತಿಕ್ರಿಯೆ ನೀಡುವ ಜೊಳ್ಳುಗಳನ್ನು ತೇಲಿ ಬಿಟ್ಟು ಉತ್ತಮವಾದುದನ್ನು ಮಾತ್ರ ಇಟ್ಟು ಕೊಂಡು ಬಂಟ ಸಮುದಾಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಕಾರ್ಯ ನಡೆಯಬೇಕು, ವಿವಿಧ ಭಾಗಗಳಲ್ಲಿ ಹಂಚಿ ಹೋಗಿರುವ ಬಂಟ ಸಮುದಾಯದ ಬಂಧುಗಳನ್ನು ಒಂದೇ ಸೂರಿನಡಿಗೆ ತರುವ ಕಾರ್ಯ ಆಗಬೇಕು ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ, ಮಾಲಾಡಿ ಬಂಟ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಬ್ರಹ್ಮರಕೂಟ್ಲುವಿನ ಸಂಘದ ನಿವೇಶನದಲ್ಲಿ ಭಾನುವಾರ ನಡೆದ ಬಂಟ್ವಾಳ ತಾಲೂಕು ಬಂಟರ ಸಂಘದ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಹಾಗೂ ನೂತನ ಬಂಟರ ಭವನದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲಾ ಸಮುದಾಯದ ಜನರನ್ನು ಸೇರಿಸಿಕೊಂಡು, ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಗುಣ ಇರುವ ಕಾರಣಕ್ಕಾಗಿ ಬಂಟರಿಗೆ ನಾಯಕತ್ವ ಸಿಕ್ಕಿದೆ. ಇದೇ ರೀತಿ ಒಗ್ಗಟ್ಟಾಗಿ ಮುಂದುವರಿದರೆ ನಾಯಕತ್ವವೂ ಉಳಿಯುತ್ತದೆ ಜೊತೆಗೆ ಬಂಟ ಸಮುದಾಯಕ್ಕಿರುವ ಘನತೆಯೂ ಉಳಿಯುತ್ತದೆ ಎಂದರು. ಮಾತೃ ಸಂಘದ ಶತಮಾನೋತ್ಸವ ಕಾರ್ಯಕ್ರಮ ಹಾಗೂ ಜಾಗತಿಕ ಬಂಟ ಸಮ್ಮೇಳನಕ್ಕೆ ಸಿದ್ದತೆಗಳು ನಡೆಯುತ್ತಿದ್ದು ಎಲ್ಲರೂ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ನ ಶ್ರೀ ಗುರುದೇವಾನಂದ ಸ್ವಾಮೀಜಿ ಬಂಟರ ಸಂಘದ ನೂತನ ಭವನದ ನಾಮಫಲಕ ಅನಾವರಣಗೊಳಿಸಿದರು.

ಚಿತ್ರ: ಬಂಟರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ನ ಶ್ರೀ ಗುರುದೇವಾನಂದ ಸ್ವಾಮೀಜಿ ಬಂಟರ ಸಂಘದ ನೂತನ ಭವನದ ನಾಮಫಲಕ ಅನಾವರಣಗೊಳಿಸಿ ಆಶಿರ್ವಚನ ನೀಡಿದರು. ಆತ್ಮವಿಶ್ವಾಸಕ್ಕೆ ಇನ್ನೊಂದು ಹೆಸರು ಬಂಟ ಸಮಾಜ. ಬುದ್ದಿವಂತಿಕೆ ಎನ್ನುವುದು ಬಂಟ ಸಮಾಜದ ಜನರಲ್ಲಿದೆ, ಅದು ಸದ್ಭಳಕೆಯಾಗಬೇಕು. ಎಲ್ಲಾ ಜ್ಞಾನವೂ ಸಮ್ಮಿಳಿತವಾಗಿ ಒಟ್ಟೂ ಸಮಾಜದ ಮೇಲೆ ಬೆಳಕು ಚೆಲ್ಲಬೇಕು ಎಂದರು.
ಬಹುಭಾಷ ಚಿತ್ರ ನಟ ಪ್ರಕಾಶ್ ರೈ ಆಕಸ್ಮಿಕವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಗಮನ ಸೆಳೆದರು. ಎಷ್ಟೋ ಭಾಷೆಗಳನ್ನು ಕಲಿರುವ ನನಗೆ ತುಳು ಭಾಷೆ ಕಲಿಯುವುದು ಕಷ್ಟವಾಗುವುದಿಲ್ಲ. ಖಂಡಿತವಾಗಿಯೂ ತುಳು ಕಲಿಯುತ್ತೇನೆ, ಮಕ್ಕಳಿಗೂ ಕಲಿಸುತ್ತೇನೆ ಎಂದ ಪ್ರಕಾಶ್ ರೈ ಬಂಟನಾಗಿರುವುದಕ್ಕೆ ನನಗೂ ಹೆಮ್ಮೆ ಇದೆ ಎಂದರು. ತಾಲೂಕು ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಅಧ್ಯಕ್ಷತೆ ವಹಿಸಿದ್ದರು.
ಬಂಟರ ಭವನ ನಿಮರ್ಾಣಕ್ಕೆ ಎರಡು ಕೋಟಿ ರುಪಾಯಿಯ ದೇಣಿಗೆ ಚೆಕ್ ನೀಡಿದ ಬೆಂಗಳೂರಿನ ಕೈಗಾರಿಕೋದ್ಯಮಿ ಪಿ.ವಿ.ಶೆಟ್ಟಿ ಬೆಳ್ಳೂರು ಪರಾರಿವರನ್ನು ಸನ್ಮಾನಿಸಲಾಯಿತು.
ಪದಗ್ರಹಣ ಸಮಾರಂಭ:
ತಾಲೂಕು ಬಂಟರ ಸಂಘದ ನೂತನ ಅಧ್ಯಕ್ಷ ವಿವೇಕ್ ಶೆಟ್ಟಿಯವರಿಗೆ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ವೀಳ್ಯ, ಗೆಂದಾಳಿ ಸೀಯಾಳ ಹಾಗೂ ಮಲ್ಲಿಗೆ ಹೂ ನೀಡಿ ಅಧಿಕಾರದ ಜವಬ್ದಾರಿ ನೀಡಿದರು. ಬಂಟರ ಸಂಘ ಹಾಗೂ ಕಟ್ಟಡ ನಿಮರ್ಾಣ ಸಮಿತಿಯ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಮಾಜಿ ಅಧ್ಯಕ್ಷ ಬೋಳಂತೂರುಗುತ್ತು ದಿ.ಗಂಗಾಧರ ರೈಯವರು ಭವನ ನಿಮರ್ಾಣಕ್ಕೆ ಉಚಿತವಾಗಿ ನೀಡಿದ್ದ 65 ಸೆಂಟ್ಸ್ ಜಮೀನಿನ ದಾನಪತ್ರವನ್ನು ಅವರ ಮಕ್ಕಳು ಸಂಘದ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಕಟ್ಟಡ ಸಮಿತಿ ಗೌರವಾಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮನಾಥ ರೈ ಭೇಟಿ ನೀಡಿದ್ದರು. ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು, ಕಾರ್ಯಧ್ಯಕ್ಷ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ವೇದಿಕೆಯಲ್ಲಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಪ್ರಸನ್ನ ಶೆಟ್ಟಿ ಏಚಿಲ್, ಎ.ಸದಾನಂದ ಶೆಟ್ಟಿ, ರಘು ಎಲ್.ಶೆಟ್ಟಿ ಬೆಳ್ಳೂರು, ಡಾ. ನಂದಕಿಶೋರ್ ಆಳ್ವ ಅಳಿಕೆ, ಪಿ.ವಿ.ಶೆಟ್ಟಿ ಬೆಳ್ಳೂರು ಪರಾರಿ, ಸುರೇಶ್ ಆಳ್ವ ಪರಾರಿಗುತ್ತು, ಪದ್ಮನಾಭ ಪಯ್ಯಡೆ, ರಾಜೇಶ್ ಎಸ್.ಚೌಟ, ರೋಹಿತ್ ಡಿ.ಶೆಟ್ಟಿ, ಲಕ್ಷ್ಮೀಶ ಭಂಡಾರಿ, ಎ.ಜೆ.ಶೆಟ್ಟಿ, ಕೆ.ಪಿ.ಶೆಟ್ಟಿ, ರವಿಶಂಕರ್ ಶೆಟ್ಟಿ, ಅಜಿತ್ ಚೌಟ, ದಾಮೋದರ ಎನ್.ರೈ, ಎಂ.ಸಿ.ಆರ್ ಶೆಟ್ಟಿ, ಕಿಶನ್ ಜೆ.ಶೆಟ್ಟಿ, ಪ್ರಕಾಶ್ ಶೆಟ್ಟಿ, ಕುಸುಮೋದರ ಶೆಟ್ಟಿ, ಮಂಜುನಾಥ ಭಂಡಾರಿ, ಪುರುಷೋತ್ತಮ ರೈ, ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಕನರ್ಿರೆ, ಮಾಜಿ ಅಧ್ಯಕ್ಷ ಸಿ.ಎ. ಶಂಕರ ಶೆಟ್ಟಿ, ಆದ್ಯಪಾಡಿ ಶ್ರೀ ಉಮಾಮಹೇಶ್ವರೀ ದೇವಸ್ಥಾನದ ಮೊಕ್ತೇಸರ ಮಂಜುನಾಥ ಭಂಡಾರಿ ಶೆಡ್ಡೆ ಮೊದಲಾದವರು ಭಾಗವಹಿಸಿದ್ದರು.
ಸಂಘದ ಕಾರ್ಯದಶರ್ಿ ಚಂದ್ರಹಾಸ ಡಿ.ಶೆಟ್ಟಿ ಸ್ವಾಗತಿಸಿದರು. ಉಪಾಧ್ಯಕ್ಷ ಕಿರಣ್ ಹೆಗ್ಡೆ ಪ್ರಸ್ತಾವಿಕವಾಗಿ ಮಾತನಾಡಿದರು. ಕಟ್ಟಡ ಸಮಿತಿ ಕಾರ್ಯದಶರ್ಿ ಕೊಳಂಬೆ ಶಶಿರಾಜ್ ಶೆಟ್ಟಿ ವಂದಿಸಿದರು. ಪುರಸಭಾ ಸದಸ್ಯ ದೇವದಾಸ್ ಶೆಟ್ಟಿ, ಬಾಲಕೃಷ್ಣ ಆಳ್ವ ಕೊಡಾಜೆ, ಮಲ್ಲಿಕಾ ಶೆಟ್ಟಿ ನಿರೂಪಿಸಿದರು. ಬಳಿಕ ಆಳ್ವಾಸ್ ಎಜುಕೇಶನ್ ಫೌಂಡೇಶನ್ ವಿದ್ಯಾಥರ್ಿಗಳಿಂದ ಸಂಮೋಹನ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.
