ಪ್ರಯತ್ನವಿಲ್ಲದೇ ಗುರಿ ಸಾಧಿಸುವುದು ಕಷ್ಟಸಾಧ್ಯ.: ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ
ಬಂಟ್ವಾಳ: ಪರೀಕ್ಷೆಗಳಲ್ಲಿ ಅಂಕಗಳಿಸುವುದಕ್ಕಿಂತ ಜೀವನದಲ್ಲಿ ಅನುಭವ ಗಳಿಸಿದವನು ಯಶಸ್ವಿಯಾಗುತ್ತಾನೆ. ಗುರುಗಳು ಹಾಗೂ ಹಿರಿಯರು ಜೀವನದ ಮಾರ್ಗದರ್ಶಕರು ಮಾತ್ರ ಗುರಿ ತಲುಪುವವರು ನಾವು ಹಾಗಾಗಿ ಪ್ರಯತ್ನವಿಲ್ಲದೇ ಗುರಿ ಸಾಧಿಸುವುದು ಕಷ್ಟಸಾಧ್ಯ.

ಸಹಕಾರ ಪ್ರವೃತ್ತಿಯನ್ನು ವಿದ್ಯಾರ್ಥಿದಿಸೆಯಲ್ಲಿಯೇ ಬೆಳಸಿಕೊಂಡಲ್ಲಿ ಸಮಾಜದಲ್ಲಿ ಯಾವುದೇ ತಾರತಮ್ಯವಿರುವುದಿಲ್ಲ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ, ಹಿರಿಯ ಯಕ್ಷಗಾನ ಕಲಾವಿದರಾದ ಎಮ್.ಜಬ್ಬರ್ ಸಮೋ ಸಂಪಾಜೆ ಹೇಳಿದ್ದಾರೆ.
ಬಂಟ್ವಾಳ ಶ್ರೀ ವೆಂಕಟರಮಣಸ್ವಾಮೀ ಪದವಿ ಹಾಗೂ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ಶ್ರೀ ವೆಂಕಟರಮಣಸ್ವಾಮೀ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕರಾದ ಕೆ ರೇಖಾ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೇ ವಿಶ್ವವಿದ್ಯಾಲಯ ಮಟ್ಟದ ರ‍್ಯಾಂಕ್ ವಿಜೇತ ವಿದ್ಯಾರ್ಥಿನಿ ಯಶ್ವಿತಾ ಹೆಚ್.ಆರ್. ಹಾಗೂ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ಎನ್.ಸಿ.ಸಿ. ವಿದ್ಯಾರ್ಥಿ ಅಭಿನ್ ಹೆಚ್ ರೈ ಇವರನ್ನು ಸನ್ಮಾನಿಸಲಾಯಿತು.
ಪದವಿ ಕಾಲೇಜು ವಾರ್ಷಿಕ ವರದಿಯನ್ನು ಪ್ರಾಂಶುಪಾಲ ಎಂ.ಡಿ.ಮಂಚಿ ಹಾಗೂ ಪದವಿಪೂರ್ವ ಕಾಲೇಜು ವಾರ್ಷಿಕ ವರದಿಯನ್ನು ಪ್ರಾಂಶುಪಾಲ ಸುದರ್ಶನ ಬಿ ವಾಚಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥ ಶಿವಣ್ಣ ಪ್ರಭು, ಅಖಿಲಾ ಪೈ ಹೆಚ್. ಝೀನಾ ಕೋಹಿಲೋ , ಶಶಿಧರ್ ಉಪಸ್ಥಿತರಿದ್ದರು.
ಗೀತಾ ಯು. ಸ್ವಾಗತಿಸಿ, ಸಹನಾ ವಂದಿಸಿದರು. ವೀಕ್ಷಿತಾ ಗಟ್ಟಿ, ಸೂರಜ್ ಕಾರ್ಯಕ್ರಮ ನಿರೂಪಿಸಿದರು..,
ನಂತರ ವಿದ್ಯಾರ್ಥಿಗಳಿಂದ “ಶಿವಭಕ್ತ ವೀರಮಣಿ” ಎಂಬ ಯಕ್ಷಗಾನ ಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಮಾಜಿಕ ತುಳು ನಾಟಕ ಪ್ರದರ್ಶನಗೊಂಡಿತು.



