ಮಾತೆಯವರಿಗಾಗಿ ಸಪ್ತಶಕ್ತಿ ಸಂಗಮ ಕಾರ್ಯಕ್ರಮ
ಬಂಟ್ವಾಳ: ವಿದ್ಯಾ ಭಾರತಿ ಅಖಿಲ ಭಾರತ ಶಿಕ್ಷಣ ಸಂಸ್ಥಾನ ಆಶ್ರಯದಲ್ಲಿ ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಮಾತೆಯವರಿಗಾಗಿ ಸಪ್ತಶಕ್ತಿ ಸಂಗಮ ಕಾರ್ಯಕ್ರಮ ನಡೆಸಲಾಯಿತು.

ಅತಿಥಿಯಾಗಿದ್ದ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕರಾದ ಅನ್ನಪೂರ್ಣ ಮಾತಾಜಿ ಅವರು ಮಾತನಾಡಿ, ಕುಟುಂಬ ಹಾಗೂ ಪರಿಸರದಲ್ಲಿ ಮಾತೆಯರ ಪಾತ್ರ ಬಹಳ ಮುಖ್ಯವಾಗಿದ್ದು ಮಾತೆಯವರು ಮಾಡುವ ಪ್ರತಿಯೊಂದು ಕೆಲಸವು ಮಕ್ಕಳಿಗೆ ಪ್ರೇರಣೆಯಾಗುವಂತಿರಬೇಕು ಎಂದರು. ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕರಾದ ರಾಜೇಶ್ವರಿ ಮಾತಾಜಿ ಅವರು “ಭಾರತದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ” ಎಂಬ ವಿಷಯದ ಬಗ್ಗೆ ಮಾತನಾಡಿದರು.
ಆಡಳಿತ ಮಂಡಳಿ ಸದಸ್ಯರಾದ ಅಕ್ಷತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾತೃಭಾರತಿಸದಸ್ಯೆಯರಾದ ವೀಣಾ, ರೇಖಾ ಶರ್ಮ ಉಪಸ್ಥಿತರಿದ್ದರು. ಉಪನ್ಯಾಸಕಿ ಚೈತನ್ಯ ಪ್ರಾಸ್ತವಿಕವಾಗಿ ಮಾತನಾಡಿದರು. ಇದಕ್ಕೂ ಮೊದಲು ಮಾತೆಯರನ್ನು ಅರಿಶಿನ ಕುಂಕುಮ ನೀಡಿ ಆರತಿ ಬೆಳಗಿಸಿ ಬರಮಾಡಿಕೊಳ್ಳಲಾಯಿತು. ಭಾರತ ಮಾತೆಗೆ ದೀಪ ಪ್ರಜ್ವಲನೆ ಹಾಗೂ ಪುಷ್ಪಾರ್ಚನೆ ಮಾಡಿ ಅಗ್ನಿಹೋತ್ರದೊಂದಿಗೆ ಸರಸ್ವತಿ ವಂದನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭ ಸಪ್ತ ಶಕ್ತಿಗಳನ್ನು ಜಾಗೃತಗೊಳಿಸಲು ಮಾತೆಯರು ಸಂಕಲ್ಪ ಮಾಡಿದರು. ಸುಮಾರು ೧೫೮ ಮಾತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವೇಷಭೂಷಣಗಳ ಜೊತೆ ಸಂದೇಶ: ವಿದ್ಯಾರ್ಥಿಗಳು ವಿವಿಧ ಧೀರ ನಾರಿಯರಾದ ಒನಕೆ ಓಬವ್ವ, ಸಂತ ಮೀರಾಬಾಯಿ, ಕಿತ್ತೂರು ರಾಣಿ ಚೆನ್ನಮ್ಮ ಇತ್ಯಾದಿ ವೀರ ಮಹಿಳೆಯರ ವೇಷಭೂಷಣಗಳನ್ನು ಧರಿಸಿ ಸಂದೇಶವನ್ನು ಸಾರಿದರು.
ನಮ್ಯ ಶ್ರೀ ಸ್ವಾಗತಿಸಿ, ಶೈಲಿನಿ ವಂದಿಸಿದರು. ಉಪನ್ಯಾಸಕಿ ಕು. ಶ್ವೇತಾ ಕಾರ್ಯಕ್ರಮ ನಿರೂಪಿಸಿದರು



