ಮೂಡುಬಿದಿರೆ: ಶ್ರೀ ಕಾಶೀಮಠಾಧೀಶ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟ ಶಿಷ್ಯ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಡಿ16ರಿಂದ19ರವರೆಗೆ ಇಲ್ಲಿನ ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮೊಕ್ಕಾಂ ನಡೆಸಲಿದ್ದಾರೆ.
ಡಿ16ರ ರಾತ್ರಿ 8ಕ್ಕೆ ಗುರುಪುರ ಮೊಕ್ಕಾಂನಿಂದ ಶ್ರೀಗಳವರು ಮೂಡುಬಿದಿರೆ ದೇವಳಕ್ಕೆ ಮೊಕ್ಕಾಂಗಾಗಿ ಚಿತ್ತೈಸಲಿದ್ದಾರೆ.

ಡಿ17ರಂದು ಒಂಟಿಕಟ್ಟೆ ಪ್ರಶಾಂತ್ವಾಟಿಕಾದಲ್ಲಿ ಸಹಸ್ರಚಂಡಿಕಾಯಾಗದ ಪೂಣರ್ಾಹುತಿ ಕಾರ್ಯಕ್ರಮದಲ್ಲಿ ಶ್ರೀಗಳವರು ಭಾಗವಹಿಸಲಿದ್ದಾರೆ. ಡಿ18ರಂದು ಬೆಳಿಗ್ಗೆ ತಪ್ತ ಮುದ್ರಾಧಾರಣೆ ಕಾರ್ಯಕ್ರಮ, ಡಿ19ರಂದು ಬೆಳಿಗ್ಗೆ ಶ್ರೀ ಹನುಮಂತ ದೇವಳಕ್ಕೆ ಚಿತ್ತೈಸಿ ಶ್ರೀಗಳವರಿಂದ ದೇವರಿಗೆ ಸೀಯಾಳಾಭಿಷೇಕ ನಡೆಯಲಿದೆ. ಅಂದು ಸಂಜೆ 6ರಿಂದ ಶ್ರೀಗಳವರ ಆಶೀರ್ವಚನ, ಫಲಮಂತ್ರಾಕ್ಷತೆಯ ಬಳಿಕ ಉಡುಪಿ ಮೊಕ್ಕಾಂಗೆ ಶ್ರೀಗಳವರನ್ನು ಬೀಳ್ಕೊಡಲಾಗುತ್ತದೆ ಎಂದು ದೇವಳದ ಆಡಳಿತ ಮೊಕ್ತೇಸರ ಜಿ.ಉಮೇಶ್ ಪೈ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿತ್ರ: ಸಂಯಮೀಂದ್ರ ತೀರ್ಥ ಸ್ವಾಮೀಜಿ
