ಮೂಡುಬಿದಿರೆ: ಹೊಸ ಅಲೋಚನೆ, ಅನ್ವೇಷಣೆಗಳನ್ನು ಮಾಡುವುದರ ಮೂಲಕ ನಮ್ಮಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ವೃದ್ಧಿಗೊಳಿಸಬೇಕು. ವಿಜ್ಞಾನದ ಹಿಂದಿನ ಅನ್ವೇಷಣೆಗಳ ಅಧ್ಯಯನ ಮಾತ್ರವಲ್ಲ ವಿಜ್ಞಾನದಲ್ಲಿ ಹೊಸ ಪ್ರಯೋಗಗಳನ್ನು ಮಾಡುವ ಬಗ್ಗೆ ವಿದ್ಯಾಥರ್ಿಗಳು ಚಿಂತನೆ ನಡೆಸಬೇಕೆಂದು ಮೂಡುಬಿದರೆ ಪುರಸಭೆ ಅಧ್ಯಕ್ಷೆ ಸುಪ್ರಿಯಾ.ಡಿ.ಶೆಟ್ಟಿ ಹೇಳಿದರು. ಅವರು ಶುಕ್ರವಾರ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ,ಪ್ರಾಂತ್ಯ ಸಂಯುಕ್ತ ಪ್ರೌಢಶಾಲೆಯ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ವಿಜ್ಞಾನ ಮಹಾಮೇಳ-2014ರ ಸಮಾರೋಪ ಸಮಾರಂಭದ ಅಧ್ಯಕ್ಷೆ ವಹಿಸಿ ಮಾತನಾಡಿದರು.

ವಲಯದ 23 ಶಾಲೆಗಳಿಂದ ಸುಮಾರು 4 ಸಾವಿರ ವಿದ್ಯಾಥರ್ಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪ್ರಾಂತ್ಯ ಸಂಯುಕ್ತ ಪ್ರೌಢಶಾಲೆ ಹಾಗೂ ಜ್ಯೋತಿನಗರದ ಬಾಬುರಾಜೇಂದ್ರ ಪ್ರೌಢಶಾಲೆಯ ವಿದ್ಯಾಥರ್ಿಗಳು ಸುಮಾರು 60 ವಿಜ್ಞಾನ ಮಾದರಿಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಿದರು. ಜೀವಶಾಸ್ತ್ರಕ್ಕೆ ಸಂಬಂಧಿಸಿದಂತೆ ಸಂವಾದ ಕಾರ್ಯಕ್ರಮ ನಡೆಯಿತು. ಹೊಸನಗರ ವಿಜ್ಞಾನ ಕೇಂದ್ರದ ನಾಗರಾಜ್ ಹಾಗೂ ಉತ್ತರ ಕನ್ನಡದ ಗಣೇಶ್ ಪವಾಡ ಬಯಲು ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಿದರು. ತೋಟಗಾರಿಕೆಯ ಬಗ್ಗೆ ಮಾಹಿತಿ ನೀಡಲಾಯಿತು. ಪ್ರಾತ್ಯಕ್ಷಿಕೆ ನಡೆಸಿಕೊಟ್ಟ ಪ್ರಮಾಣ ಪತ್ರ ವಿತರಿಸಲಾಯಿತು.
ಮೂಡುಬಿದರೆ ರೋಟರಿ ಕ್ಲಬ್ನ ನಿಯೋಜಿತ ಅಧ್ಯಕ್ಷ, ಪುರಸಭಾ ಸದಸ್ಯ ಪಿ.ಕೆ.ಥೋಮಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಜ್ಞಾನದ ಅಧ್ಯಯನವನ್ನು ಸರಳ ವಿಧಾನಗಳಿಂದ ಮನನ ಮಾಡಬೇಕು. ವೈಜ್ಞಾನಿಕ ಚಿಂತನೆಯಿಂದ ನಮ್ಮಲ್ಲಿ ಹೊಸ ಚಿಂತನೆಗಳು ಮೂಡುತ್ತದೆ ಎಂದರು.
ಮೂಡುಬಿದರೆ ಸಮುದಾಯ ಆರೋಗ್ಯ ಕೇಂದ್ರ ಆರೋಗ್ಯ ಅಧಿಕಾರಿ ಸುಶೀಲ, ರೋಟರಿ ಕ್ಲಬ್ ಸದಸ್ಯ ರವಿ ಪ್ರಸಾದ್ ಉಪಾಧ್ಯಾಯ, ಉದ್ಯಮಿ ದಿಲೀಪ್ ಕುಮಾರ್ ಶೆಟ್ಟಿ,ಪ್ರಾಂತ್ಯ ಸಕರ್ಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ರಾಜಶ್ರೀ, ಪ್ರೌಢಶಾಲೆ ಎಸ್ಡಿಎಂಸಿ ಅಧ್ಯಕ್ಷ ಸುರೇಶ್ ಪ್ರಭು, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಆನಂದ, ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ನಿಲಯ್ಯ ಉಪಸ್ಥಿತರಿದ್ದರು.
ಅಗಸ್ತ್ಯ ವಲಯಾಧಿಕಾರಿ ಸುಬ್ರಹ್ಮಣ್ಯ ಸ್ವಾಗತಿಸಿದರು. ಕನ್ನಡ ಅದ್ಯಾಪಕ ಕುಂಜೂರು ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ಅಗಸ್ತ್ಯ ಮೂಡುಬಿದರೆ ಘಟಕದ ಅಧ್ಯಕ್ಷ ಕಿರಣ್ ದೇವಾಡಿಗ ವಂದಿಸಿದರು.


