ಬಂಟ್ವಾಳ: ತಾಲೂಕಿನ ಕೊಳಲಬಾಕಿಮಾರು ಶಾಲೆ ಮತ್ತು ಅಂಗನವಾಡಿ ಸಹಯೋಗದಲ್ಲಿ ಮಕ್ಕಳ ದಿನಾಚರಣೆಯನ್ನು “ಮಕ್ಕಳ ಹಬ್ಬ – 2025” ವನ್ನಾಗಿ  ಕೊಳಲಬಾಕಿಮಾರು ಶಾಲಾ ಆವರಣದಲ್ಲಿ ಆಚರಿಸಲಾಯಿತು.

ಜವಹರಲಾಲ್ ನೆಹರುರವರ ಭಾವಚಿತ್ರಕ ಅತಿಥಿಗಳು ಪುಷ್ಪಾರ್ಚನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಲಾ  ನಾಯಕನಾದ ರಿತ್ವಿಕ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, .ಶಾಲಾ ಉಪನಾಯಕಿ ಹಿತ,  ರಿಶಾನಿ,ಚಶ್ವಿತ್ ,ಸಹನಾ ಎಂ ಶೆಟ್ಟಿ, ಲತಾಶ್ರೀ, ಗ್ರಾಮ ಪಂಚಾಯಿತಿಯ ಸದಸ್ಯರಾದ  ಸುಧೀಂದ್ರ ಶೆಟ್ಟಿ, ಹರಿಣಾಕ್ಷಿ , ಮಾಲತಿ,  ವಿಮಲಾ, ಮಂಜುನಾಥ, ವನಿತಾ,  ಯಶೋಧ, ಸಂಧ್ಯಾ,* ಅರುಂಧತಿ,  ನಳಿನಿ  ಮೊದಲಾದವರು ಉಪಸ್ಥಿತರಿದ್ದರು.


ಇದೇ ವೇಳೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬಹುಮಾನವನ್ನು ಪಡೆದ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಜಾನ್ವಿತ ಹಾಗೂ‌ ಕೊಳಲಬಾಕಿಮಾರು ಶಾಲಾ ಪರಿಸರದ ಇಬ್ಬರು ಪ್ರತಿಭೆಗಳಾದ ಸಹನ ಎಂ ಶೆಟ್ಟಿ ಮತ್ತು ಲತಾಶ್ರೀ ಅವರನ್ನು ಅಭಿನಂದಿಸಲಾಯಿತು.
ಶಿಕ್ಷಕಿಯಾದ  ನಿಕಿತ. ಕೆ ಸ್ವಾಗತಿಸಿದರು.  ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ  ರಾಜೇಶ್ ಕೆ.ವಂದಿಸಿದರು

By suddi9

Leave a Reply

Your email address will not be published. Required fields are marked *