ಪೊಳಲಿ: ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ಶ್ರೀ ಅಖಿಲೇಶ್ವರ ಓಂಕಾರ ಭಜನಾ ಮಂಡಳಿ (ರಿ)ಪೊಳಲಿ ಇದರ ಹತ್ತನೇ ವರ್ಷದ ಪ್ರಯುಕ್ತ ನವೆಂಬರ್ 15 ರಿಂದ ನವೆಂಬರ್ 16 ರವರೇಗೆ 24 ಗಂಟೆಗಳ ಆಹೋ ರಾತ್ರಿ ಏಕಾಹಾ ಭಜನಾ ಮಹೋತ್ಸವ ನಡೆಯಲಿದೆ.

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆಯೊಂದಿಗೆ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಲಿದ್ದಾರೆ. ನವೆಂಬರ್ 15. ಶನಿವಾರ ಸೂರ್ಯೋದಯದಿಂದ ನವೆಂಬರ್ 16 ಭಾನುವಾರ ಸೂರ್ಯೋದಯದ ವರೇಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಹಾಗೂ ನವೆಂಬರ್ 16ರಂದು ಭಾನುವಾರ ಸಂಜೆ ಆನಂದ ಭಜನೆ ನವೆಂಬರ್ 17ರಂದು ವಾರದ ಭಜನೆ ನಡೆಯಲಿದೆ.

By Suddi9

Leave a Reply

Your email address will not be published. Required fields are marked *