ರೈತರಿಗೆ ಗರಿಷ್ಠ ಬೆಳೆ ವಿಮೆ ಪರಿಹಾರ ದೊರಕುವಲ್ಲಿ ಬೆಳೆ ಸಮೀಕ್ಷೆ ಖಾಸಗಿ ನಿವಾಸಿಗಳ ಪಾತ್ರ ಮಹತ್ತರ : ಪ್ರಭಾಕರ ಪ್ರಭು
ಬಂಟ್ವಾಳ: ಅತಿವೃಷ್ಟಿ, ಅನಾವೃಷ್ಟಿ ಹಾಗೂ ನಿರಂತರ ಮಳೆಯಿಂದಾಗಿ ಕೃಷಿಕರ ಅಡಿಕೆ ಮತ್ತು ಕರೀಮೆಣಸು ಬೆಳೆಗಳು ವಿವಿಧ ರೋಗಗಳಿಂದ ಬಾಧೀತವಾಗಿ ರೈತರಿಗೆ ನಷ್ಟ ಉಂಟಾದಾಗ ಕೃಷಿಕರ ಬಾಳಿಗೆ ವರದಾನ ವಾಗಿರುವ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಗರಿಷ್ಠ ಪರಿಹಾರವು ರೈತರಿಗೆ ದೊರಕಿಸುವಲ್ಲಿ ಕೃಷಿ ಇಲಾಖೆ ಯಿಂದ ನಿಯೋಜಸಲ್ಪಟ್ಟ ಬೆಳೆ ಸಮೀಕ್ಷೆ ಖಾಸಗಿ ನಿವಾಸಿಗಳ ಪಾತ್ರ ಪ್ರಮುಖವಾಗಿದೆ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅಭಿಪ್ರಾಯ ಪಟ್ಟಿದ್ದಾರೆ.
ಮಂಗಳವಾರ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಬಿ. ಕೃಷ್ಣ ರೈ ರೈತ ಸಭಾಂಗಣದಲ್ಲಿ ಸಂಘದ ವ್ಯಾಪ್ತಿಗೊಳಪಟ್ಟ ಗ್ರಾಮಗಳ, ಬೆಳೆ ಸಮೀಕ್ಷೆಯಲ್ಲಿ ಶ್ರಮಿಸಿದ ಖಾಸಗಿ ನಿವಾಸಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.

ಕೆಲ ರೈತರು ತಾವೂ ಹೊಂದಿದ ಜಮೀನಿನಲ್ಲಿರುವ ಬೆಳೆ ಸಮೀಕೆಯನ್ನು ತಾವೇ ಮಾಡುತ್ತಿದ್ದು ಬಹುತೇಕ ರೈತರ ಬೆಳೆ ಸಮೀಕೆಯನ್ನು ಕೃಷಿ ಇಲಾಖೆ ಯಿಂದ ಗುರುತಿಸಿಕೊಂಡಿರುವ ಗ್ರಾಮ ಖಾಸಗಿ ನಿವಾಸಿಗಳು ರೈತರ ತೋಟಗಳಿಗೆ ಹೋಗಿ ಬೆಳೆ ಸಮೀಕ್ಷೆ ಮಾಡಿರುವ ಪರಿಣಾಮ ಕರಾವಳಿ ಜೆಲ್ಲೆಗಳಲ್ಲಿ ದಾಖಲೆ ಪ್ರಮಾಣದಲ್ಲಿ ರೈತರಿಗೆ ಬೆಲಕೆ ವಿಮೆ ಪರಿಹಾರ ದೊರಕುತ್ತಿದೆ ಎಂದ ಅವರು ಈ ನಿಟ್ಟಿನಲ್ಲಿ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಗರಿಷ್ಠ ಪ್ರಮಾಣದಲ್ಲಿ ರೈತರ ಬೆಳೆ ಸಮೀಕ್ಷೆ ನಡೆಸಿ ಹವಾಮಾನ ಆಧಾರಿತ ಬೆಳೆ ವಿಮೆಗೆ ನೋಂದಾಯಿಸಿ ಸಂಘದ ವ್ಯಾಪ್ತಿಯ ರೈತರಿಗೆ ವಾರ್ಷಿಕ ಕೋಟ್ಯಾಂತರ ರೂಪಾಯಿ ಪರಿಹಾರ ದೊರಕುತ್ತಿದೆ. 2025-26 ನೇ ಸಾಲಿನಲ್ಲಿ 1855 ರೈತರು 2396 ಎಕ್ರೆಗಳಿಗೆ 63 ಲಕ್ಷ ಪ್ರೀಮಿಯಂ ಪಾವತಿಯಾಗಿದೆ ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿಸಂಘದ
ಉಪಾಧ್ಯಕ್ಷರಾದ ಸಂದೇಶ ಶೆಟ್ಟಿ, ನಿರ್ದೇಶಕರುಗಳಾದ ಸತೀಶ್ ಪೂಜಾರಿ, ದಿನೇಶ್ ಪೂಜಾರಿ,ರಶ್ಮಿತ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ,ವಿಶ್ವನಾಥ ಶೆಟ್ಟಿಗಾರ್, ವೀರಪ್ಪ ಪರವ, ಜಾರಪ್ಪ ನಾಯ್ಕ, ಶಿವ ಗೌಡ , ಪುಷ್ಪಲತಾ ಎಸ್. ಆರ್, ,ವೃತ್ತಿಪರ ನಿರ್ದೇಶಕರಾದ ರಾಜೇಶ್ ಶೆಟ್ಟಿ, ನವೀನ ಹೆಗ್ಡೆ
ಬೆಳೆ ಸಮೀಕ್ಷೆ ಗ್ರಾಮ ನಿವಾಸಿಗಳಾದ ಕಾರ್ತಿಕ್ ನಾಯಕ್ , ಪೂಜಾ, ಭವ್ಯ ಶೋಭಾ, ನಮಿತಾ ಅಕ್ಷತಾ, ಲಕ್ಷ್ಮಿ, ಭಾರತಿ ಶೆಟ್ಟಿ, ಹೇಮಾವತಿ,ಪುಷ್ಪ ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ಸ್ವಾಗತಿಸಿ,ಸಂಘದ ಸಿಬ್ಬಂದಿ ಸುಭಾಸ್ ಬಂಗೇರ ಕಾರ್ಯಕ್ರಮ ನಿರ್ವಹಿಸಿದರು ನಿರ್ದೇಶಕಿ ಮಂದಾರತಿ ಎಸ್ ಶೆಟ್ಟಿ ವಂದಿಸಿದರು.
Join us suddi9 whatsapp group
https://chat.whatsapp.com/IJ56B84a0B93LRv2st6F4T



