Published On: Tue, Nov 11th, 2025

ಜ.18 ರಂದು ಮಂಗಳೂರಿನಲ್ಲಿ “ಜಾಗತಿಕ ಬಿಲ್ಲವರ ಕ್ರೀಡೋತ್ಸವ- 26” 

ಬಂಟ್ವಾಳ: ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ) ಕುದ್ರೋಳಿ ಮಂಗಳೂರು ಇದರ ಅಶ್ರಯದಲ್ಲಿ “ಜಾಗತಿಕ ಬಿಲ್ಲವರ ಕ್ರೀಡೋತ್ಸವ- 26 ” ಜನವರಿ‌ 18 ರಂದು ಮಂಗಳೂರಿನ ನೆಹರು ಮೈದಾನದಲ್ಲಿ  ನಡೆಯಲಿದೆ ಎಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ.


ಮಂಗಳವಾರ ಬಂಟ್ಚಾಳ ಪ್ರೆಸ್ ಕ್ಲಬ್ ನಲ್ಲಿ‌ ಕರೆದ ಸುದ್ದಿಗೋಷ್ಠಿಯಲ್ಲಿ‌ ಈ ಬಗ್ಗೆ ಮಾಹಿತಿ‌ನೀಡಿದ ಅವರು,ಬಿಲ್ಲವ ಸಮುದಾಯಕ್ಕೊಳಪಟ್ಟ ವಿವಿಧ 26ಉಪ ಪಂಗಡದ ತಂಡಗಳಿಗೂ ಪಂದ್ಯಾಟದಲ್ಲಿ ಅವಕಾಶವಿದ್ದು,ಇದನ್ನು ಧೃಢೀಕರಿಸಿ ಬಿಲ್ಲವ ಸಂಘಗಳು ಪತ್ರಗಳನ್ನು ನೀಡಬೇಕು ಎಂದರು.


ಆನ್ ಲೈನ್ ಮೂಲಕ ತಂಡಗಳ ನೋಂದಣಿ ಕಾರ್ಯ ಈಗಾಗಲೇ ಆರಂಭವಾಗಿದ್ದು,ನ.30 ರವರೆಗೆ ಇರಲಿದೆ.ಪುರುಷರ 24 ಹಾಗೂ ಮಹಿಳೆಯರ 16 ತಂಡಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದ ವಿವರಿಸಿದ ಅವರು ಈ ಕ್ರೀಡೋತ್ಸವದಲ್ಲಿ ಪುರುಷರ ಕಬಡ್ಡಿ,ವಾಲಿಬಾಲ್ ಹಾಗೂ ಮಹಿಳೆಯರ ಕಬಡ್ಡಿ,ತ್ರೋಬಾಲ್ ಪಂದ್ಯಾಟ ನಡೆಯಲಿದೆ ಎಂದ ಅಧ್ಯಕ್ಷ ನವೀನ್ ಚಂದ್ರ ಅವರು ಸಮುದಾಯದ ಯುವ ಪೀಳಿಗೆಯನ್ನು ಸಂಘಟಿಸಿ ಮುಖ್ಯವಾಹಿನಿಗೆ ತಂದು ಆರೋಗ್ಯಪೂರ್ಣ ಸಮಾಜವನ್ನು ನಿರ್ಮಾಣಗೊಳಿಸುವ ಉದ್ದೇಶದಿಂದ ಈ ಕ್ರೀಡೋತ್ಸವವನ್ನು ಆಯೋಜಿಸಲಾಗಿದೆ ಎಂದರು.


ರಾಷ್ಟ್ರೀಯ,ಅಂತರಾಷ್ಟ್ರೀಯ  ಸಹಿತ  ವಿವಿಧ ರಾಜ್ಯದಲ್ಲಿರುವ ಸಮುದಾಯದ ಹೆಸರಾಂತ
ಕ್ರೀಡಾಪಟಗಳು ಭಾಗವಹಿಸುವ ನಿರೀಕ್ಷೆ ಇದ್ದು,ಕ್ರೀಡೋತ್ಸವದ ಲೋಗೋವನ್ನು ಚಲನಚಿತ್ರ ನಟ ಶಿವರಾಜ್ ಕುಮಾರ್ ಅವರು ಈಗಾಗಲೇ ಬಿಡುಗಡೆಗೊಳಿಸಿದ್ದು,ಅವರು ಕೂಡ ಕ್ರೀಡೋತ್ಸವದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.ಸಮುದಾಯದ ಹಲವಾರು ಗಣ್ಯರು ಅಂದು ಭಾಗವಹಿಸಲಿದ್ದಾರೆ ಎಂದರು.


ಕಬಡ್ಡಿ ಪಂದ್ಯಾಟವು ಮ್ಯಾಟ್ ನಲ್ಲಿ ನಡೆಯಲಿದ್ದು,ನಾಕ್ ಔಟ್ ಮಾದರಿಯಲ್ಲಿರುವುದು ಹಾಗೆಯೇ ವಾಲಿಬಾಲ್ ಮತ್ತು ತ್ರೋಬಾಲ್ ಬೆಸ್ಟ್ ಆಫ್ ತ್ರಿ ಮಾದರಿಯಲ್ಲಿ ನಡೆಯಲಿದೆ ಒಂದು ತಂಡದಲ್ಲಿ ಆಟಗಾರನ ಹೆಸರು ಮೊದಲು ನೋಂದಣಿಯಾದರೆ ಬಳಿಕ ಇನ್ನೊಂದು ತಂಡದಲ್ಲಿ ನೋಂದಣಿಗೆ ಅವಕಾಶವಿರುವುದಿಲ್ಲ ಎಂದು ರಾಜ್ಯ ಕಬಡ್ಡಿ ಆಟಗಾರ,ಅಖಿಲ ಭಾರತ ಬಿಲ್ಲವ ಮಹಾಮಂಡಲದ ಕೊಇಶಾಧಿಕಾರಿ ಬೇಬಿಕುಂದರ್ ಅವರು‌ ಈ ಸಂದರ್ಭದಲ್ಲಿ‌ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ತಾ.ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ,ಉಪಾಧ್ಯಕ್ಷ ಜಯಪ್ರಕಾಶ್ ಜೆ.ಎಸ್.,ಅಖಿಲ ಭಾರತ ಬಿಲ್ಲವ ಮಹಾಮಂಡಲದ ಪ್ರ.ಕಾರ್ಯದರ್ಶಿ ಜೀವನ್ ಕುಮಾರ್ ,ಕ್ರೀಡಾ ಸಂಚಾಲಕ ಸದಾನಂದ ಪೂಜಾರಿ,ಬಂಟ್ವಾಳ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಯುವವಾಹಿನಿ ಮಾಜಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಅವರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter