Published On: Tue, Nov 11th, 2025

ದ.ಕ.ಜಿಲ್ಲಾ ಸಹಕಾರ ಭಾರತಿ ವತಿಯಿಂದ ಅಭ್ಯಾಸ ವರ್ಗ

ಬಂಟ್ವಾಳ : ದ.ಕ. ಜಿಲ್ಲಾ ಸಹಕಾರ ಭಾರತಿ  ವತಿಯಿಂದ ಸಹಕಾರಿ ಭಾರತೀಯ ಜಿಲ್ಲೆ, ತಾಲೂಕು ಪದಾಧಿಕಾರಿಗಳು ಹಾಗೂ ನಿರ್ದೇಶಕರಿಗೆ ಅಭ್ಯಾಸ ವರ್ಗವು ಮಂಗಳವಾರ ಬಿ.ಸಿ.ರೋಡಿನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.

ಮಾಜಿ ಶಾಸಕ, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪದ್ಮನಾಭ ಕೊಟ್ಟಾರಿ ಅವರು ಅಭ್ಯಾಸ ವರ್ಗವನ್ನು    ಉದ್ಘಾಟಿಸಿ  ಮಾತನಾಡಿ, ಇಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಉಪಯುಕ್ತವಾದ ಮಾಹಿತಿಯ ಸದುಪಯೋಗ ಪಡೆದುಕೊಂಡು  ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ  ಸಹಕಾರ ಭಾರತಿ ಕ್ಷೇತ್ರದ ಬಲವರ್ಧನೆಗೆ ಕಾರಣವಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಹಕಾರ ಭಾರತಿ ರಾಜ್ಯಾಧ್ಯಕ್ಷರಾದ ಪ್ರಭುದೇವ ಆರ್ ಮಾಗನೂರು ಮಾತನಾಡಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪ್ರೇರಣೆಯಿಂದ ಹಿರಿಯರ ಮಾರ್ಗದರ್ಶನದೊಂದಿಗೆ ಸಹಕಾರಿ ಬಂಧುಗಳ ಪ್ರೀತಿ, ವಿಶ್ವಾಸದ ನಡುವೆ ಕರಾವಳಿ ಭಾಗದಲ್ಲಿ ಸಹಕಾರ ಕ್ಷೇತ್ರದ ಬೆಳವಣಿಗೆ ತನ್ನದೇ ಆದ ಕೊಡುಗೆಯನ್ನು ನೀಡಿರುವ ದಕ್ಷಿಣ ಕನ್ನಡ ಸಹಕಾರ ಭಾರತಿಗೆ ಮತ್ತಷ್ಟು ಶಕ್ತಿ ತುಂಬಿಸುವ ಕೆಲಸ ಆಗಲಿ ಎಂದರು.
  ಕ್ಯಾಂಪ್ಕೊ ಮಾಜಿ ನಿರ್ದೇಶಕ ರಾಧಾಕೃಷ್ಣ ಕೋಟೆ  ಬರೆದ ಪುಸ್ತಕ ಸಹಕಾರಿ ಆಡಳಿತ ನಿರ್ವಹಣೆ  ಎಂಬ ಪುಸ್ತಕ ಬಿಡುಗಡೆಗೊಳಿಸಯಿತು.
ಬಳಿಕ
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಸಹಕಾರ ಭಾರತಿ ಕರ್ನಾಟಕದ ಪ್ರಧಾನ ಕಾರ್ಯದರ್ಶಿ  ಸಾಣೂರು ನರಸಿಂಹ ಕಾಮತ್ ಸಹಕಾರ ಭಾರತಿ ಪರಿಚಯದ ಬಗ್ಗೆ  ಹಾಗೂ ಸಹಕಾರ ಭಾರತೀಯ ಪೂರ್ವ ಮಧ್ಯ ಕ್ಷೇತ್ರ ಸಂಪರ್ಕ ಪ್ರಮುಖ ಎಸ್ .ಆರ್ .ಹರಿಶ್ಚಂದ್ರ ಅವರು  ಆಡಳಿತ ಮಂಡಳಿಯ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸಹಕಾರ ಭಾರತಿ ರಾಜ್ಯ ಸಂಘಟನಾ  ಕಾರ್ಯದರ್ಶಿ ಮಂಜುನಾಥ ಬಿ ಆರ್ , ಮಹಿಳಾ ಪ್ರಮುಖ ಎಸ್ ಸುಭದ್ರ ರಾವ್ ವೇದಿಕೆಯಲ್ಲಿದ್ದರು.
ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕಿ ವಿಜಯ ಪ್ರಕಾಶ್ ಸಹಕಾರ ಗೀತೆ ಹಾಡಿದರು. ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಬಿ ಸುಧಾಕರ್ ರೈ ಪ್ರಸ್ತಾವನೆಗೈದು, ಸ್ವಾಗತಿಸಿದರು  ಉಪಾಧ್ಯಕ್ಷ ವಿಶ್ವನಾಥ ಎಂ.ವಂದಿಸಿದರು 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter