ಬಂಟ್ವಾಳ : ಮುಂದಿನ ನವೆಂಬರ್ ತಿಂಗಳಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ 2025 ರ 4ನೇ ಮಿನಿ ಒಲಿಂಪಿಕ್ ಕ್ರೀಡಾಕೂಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ 5 ಮಂದಿ ಟ್ವೆಕಾಂಡೋ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.


35 ಕೆಜಿಗಿಂತ ಕೆಳಗಿನ ವಿಭಾಗದಲ್ಲಿ ಸುರತ್ಕಲ್ ಕೋಡಿಕೆರೆ ನಿವಾಸಿ ಮಹೇಶ್ ಹನುಮಪ್ಪ-ವಿಜಯಲಕ್ಷ್ಮಿದಂಪತಿಯ ಪುತ್ರಆದರ್ಶ್,39 ಕೆಜಿ ವಿಭಾಗದಲ್ಲಿ ಬೈಕಂಪಾಡಿ ನಿವಾಸಿ ಲಲಿತ್ ಧಾಮಿ-ಲಕ್ಷ್ಮಿ ಧಾಮಿ ದಂಪತಿಯ ಪುತ್ರ ಆಶಿಶ್ ಧಾಮಿ ,38 ಕೆಜಿ ಕೆಳಗಿನ ವಿಭಾಗದಲ್ಲಿವಿಟ್ಲ ನಿವಾಸಿಅಬ್ದುಸ್ಸಲಾಂ ಪಿ-ಅನೀಶಾ ಬಿಕೆ ದಂಪತಿಯ ಪುತ್ರಿರಿಫಾ ಫಾತಿಮಾ ,ಕುಳಾಯಿ ನಿವಾಸಿ ಸಿರಾಜ್-ನಸೀಮಾ ದಂಪತಿಯ ಪುತ್ರ ಮುಹಮ್ಮದ್ ಶಿಮಾಕ್ ಅಲಿ ಹಾಗೂ 31 ಕೆಜಿ ವಿಭಾಗದಲ್ಲಿ ನಂದಾವರ ನಿವಾಸಿ ಅಬ್ದುಲ್ ಶಮೀರ್-ಯಾಸ್ಮೀನ್ ದಂಪತಿಯ ಪುತ್ರಮುಹಮ್ಮದ್ ಶಯಾನ್  ಅವರು ಮಿನಿ ಒಲಿಂಪಿಕ್ ಕ್ರೀಡಾಕೂಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.


ಕರ್ನಾಟಕ ಒಲಿಂಪಿಕ್ ಎಸೋಸಿಯೇಷನ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನವೆಂಬರ್ 3 ರಿಂದ 9ರವರೆಗೆ ಈ ಮಿನಿ ಒಲಿಂಪಿಕ್ ಕ್ರೀಡಾಕೂಟ ನಢಯಲಿದೆ.
ಈ ಕ್ರೀಡಾಪಟುಗಳು ದಕ್ಷಿಣ ಕನ್ನಡ ಜಿಲ್ಲಾ ತಂಡದಲ್ಲಿ ಸ್ಪರ್ಧಿಸಲಿದ್ದಾರೆ.
ದಕ್ಷಿಣ ಕನ್ನಡ ಟ್ವೇಕಾಂಡೋ ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಇಸ್ಹಾಕ್ ಇಸ್ಮಾಯಿಲ್ ನಂದಾವರ ಹಾಗೂ ಕೋಚ್ ಮೆಹುಲ್ ಬಂಗೇರಾ ಅವರ ನೇತೃತ್ವದಲ್ಲಿ ಎಕ್ಸ್ಟ್ರೀಂ ಫಿಟ್ ಆಂಡ್ ಫೈಟ್ ಕ್ಲಬ್ ಸಂಸ್ಥೆಯಲ್ಲಿ ಕ್ರೀಡಾಪಟುಗಳು ತರಬೇತಿ ಪಡೆದಿದ್ದಾರೆ. ಆಯ್ಕೆಯಾದ ಕ್ರೀಡಾಪಟುಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾಧಿಕಾರಿ ಪ್ರದೀಪ್ ಡಿ ಸೋಜಾ ಅವರು ಶುಭ ಹಾರೈಸಿದ್ದಾರೆ. 

By suddi9

Leave a Reply

Your email address will not be published. Required fields are marked *