ಸಿ.ಎಂ.ಗೆ ಫರಂಗಿಪೇಟೆಯಲ್ಲಿ ಅದ್ದೂರಿ ಸ್ವಾಗತ
ಬಂಟ್ವಾಳ:ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಸಾಗಿ ಕಾರ್ಯಕ್ರಮದ ನಿಮಿತ್ತ ಮಂಗಳೂರು ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಪುತ್ತೂರಿಗೆ ತೆರಳುವ ಸಂದರ್ಭ ಫರಂಗಿಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.

ಸಿಎಂ ಅವರು ಕಾರಿನಿಂದಿಳಿದು ಕಾರ್ಯಕರ್ತರ ಗೌರವವನ್ನು ಹಾಗೂ ವಿವಿಧ ಬೇಡಿಕೆಯ ಅಹವಾಲನ್ನು ಸ್ವೀಕರಿಸಿದರು.ಈ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು ಸಿ.ಎಂ.ಅವರಿಗೆ ಪುಪ್ಪಾರ್ಚನೆಗೈದರಲ್ಲದೆ ಪುಷ್ಪಗುಚ್ಚ ನೀಡಲು,ಕೈಕುಲುಕಲು ಮುಗಿಬಿದ್ದರು.

ಜಿ.ಪಂ.ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಉಮ್ಮರ್ ಫಾರೂಕ್ ಫರಂಗಿಪೇಟೆ,ಪುದು ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ,ಉಪಾಧ್ಯಕ್ಷೆ ರುಕ್ಸಾನಾ ಬಾನು ಅಮ್ಮೆಮಾರ್
ಮಂಗಳೂರು ತಾ.ಪಂ.ಮಾಜಿ ಅಧ್ಯಕ್ಷ ಮಹಮ್ಮದ್ ಮೋನು, ಮೇರಮಜಲು ಗ್ರಾ.ಪಂ.ಮಾಜಿ ಅಧ್ಯಕ್ಷೆ ವೃಂದಾ ಪೂಜಾರಿ ಪಕ್ಷದ ಮುಖಂಡರು,ಕಾರ್ಯಕರ್ತರು ಉಪಸ್ಥಿತರಿದ್ದರು.
ಸಿ.ಎಂ.ರಸ್ತೆ ಮೂಲಕ ಪುತ್ತೂರಿಗೆ ತೆರಳಿ ವಾಪಾಸ್ ಅಗುವವರೆಗೂ ಹೆದ್ದಾರಿಯುದ್ದಕ್ಕು ಸಂಚಾರಕ್ಕೆ ಅಡಚಣೆಯಾಗದಂತೆ ಪೊಲೀಸರು ಬಂದೋಬಸ್ತು ಏರ್ಪಡಿಸಿದ್ದರು.
ಬಿ.ಸಿ.ರೋಡಿನ ಖಾಸಗಿ ಬಸ್ ನಿಲ್ದಾಣದ ಮುಂಭಾಗ ಪ್ರತಿನಿತ್ಯ ಹೆದ್ದಾರಿಯಲ್ಲಿ ಸರಕಾರಿ,ಖಾಸಗಿ ಬಸ್ ಗಳು ನಿಲುಗಡೆಯಾಗಿ ಸುಗಮ ಸಂಚಾರಕ್ಕೆ ಅಡಚಣೆಯಾದರೂ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಅತ್ತ ಸುಳಿಯದ ಸಂಚಾರಿ ಪೊಲೀಸರು ಶನಿವಾರ ಸಿಎಂ ಅವರ ಸಂಚಾರದ ಹಿನ್ನಲೆಯಲ್ಲಿ ಬೆಳಗ್ಗಿನಿಂದಲೇ ಬಸ್ ಗಳನ್ನು ರಸ್ತೆಯಲ್ಲಿ ಹೆಚ್ಚು ಹೊತ್ತು ನಿಲುಗಡೆಗೆ ಬಿಡದ ದೃಶ್ಯವು ಕಂಡುಬಂತು.



