ನವದೆಹಲಿ: ಪಾಕಿಸ್ತಾನದ ಯುದ್ಧನೌಕೆ ಗಾಝಿ ಎಂಬ ಜಲಾಂರ್ಗಾಮಿ ನೌಕೆಯನ್ನು ಮುಳುಗಿಸಿ ಒಂದು ಕ್ಷಿಪಣಿಯ ಮೂಲಕ ದಾಳಿ ನಡೆಸಿ ಅದನ್ನು ಛಿದ್ರವಿಛಿದ್ರಗೊಳಿಸಿದ ಕೀರ್ತಿ ಭಾರತದ ಯುದ್ಧ ನೌಕೆ ನೀಲಕಂಠನಿಗೆ ಸಲ್ಲುತ್ತದೆ.
1971ರಲ್ಲಿ ಈ ಯುದ್ಧ ನಡೆದಿತ್ತು. ಡಿ.16 ಬಾಂಗ್ಲಾದೇಶದ ಮುಕ್ತಿ ಹಾಗೂ ಭಾರತ ಪಾಕಿಸ್ತಾನದ ವಿರುದ್ಧ ವಿಜಯಗಳಿಸಿದ ದಿನವಾಗಿದೆ.

vikra

ಭಾರತ ಕ್ಷಿಪಣಿ ತಯಾರಿಸುವಲ್ಲಿ ಆಗಲೇ ಮುಂಚೂಣಿಯಲ್ಲಿತ್ತು. ಅಂದಿನ ನೌಕಾಫಿಪತಿಯಾಗಿದ್ದ ಅಡ್ಮಿರಲ್ ಕೃಷ್ಣನ್ ರಕ್ಷಣಾ ಇಲಾಖೆಗೆ ಯುದ್ಧ ನೌಕೆ ಖರೀದಿಸಲು ಆಸಕ್ತಿ ತೋರಿಸುತ್ತಿದ್ದರು. ನೌಕೆ ಖರೀದಿಸಲು ರಷ್ಯನ್ ನೌಕಾದಳದ ಮುಖ್ಯಸ್ಥ ಗ್ರ್ಯಾಂಡ್ ಆಡ್ಮಿರಲ್ ಗಾಶರ್್ಕಾವ್ಹರೊಂದಿಗೆ ಮೊದಲ ಹಂತದ ಮಾತುಕತೆಯನ್ನು ಇವರೇ ನಡೆಸಿದ್ದರು. ಅನಂತರ ಮುಂಬಯಿಯಲ್ಲಿ ನೌಕಾದಳದ ಪಶ್ಚಿಮ ವಿಭಾಗದ ಮುಖ್ಯಸ್ಥರಿರುವಾಗ ತಾವೇ ನೌಕಾದಳದಿಂದ ಈ ನೌಕೆಯನ್ನು ಉಪಯೋಗಿಸುವ ಅಭ್ಯಾಸ ಮಾಡಿಸಿಕೊಂಡಿದ್ದರು.
ಅದು 1971. ಪಾಕಿಸ್ತಾನ ಕರಾಚಿ ಮುಖಾಂತರ ಭಾರತಕ್ಕೆ ತನ್ನ ಯುದ್ಧನೌಕೆಯಾದ ಗಾಝಿಯನ್ನು ನುಗ್ಗಿಸುತ್ತಿತ್ತು. ಅದರ ಕಣ್ಣು ಭಾರತದ ಭಾರತದ ಯುದ್ಧ ವಿಮಾನ ವಿಕ್ರಾಂತದತ್ತ ಇತ್ತು. ಆದರೆ ಕೃಷ್ಣನ್ ಕಣ್ಣು ಗಾಝಿಯ ಮೇಲಿತ್ತು . ವಿಷಾಖಪಟ್ಟಿನಂನ ಪೂರ್ವ ವಿಭಾಘದ ಯುದ್ಧ ನೌಕೆಯ ಮುಖ್ಯಸ್ಥರಾಗಿದ್ದ ಕೃಷ್ಣನ್ ತನ್ನ ಯುದ್ಧವಿಮಾನ ವಿಕ್ರಾಂತವನ್ನು ವಿಶಾಖಾ ಪಟ್ಟಣಂ ದಂಡೆಯಿಂದ ಅನೇಕ ಕಿಲೋಮೀಟರ ದೂರವಿದ್ದ ಬಂಗಾಲ ಉಪಮಹಾ ಸಾಗರದಲ್ಲಿ ಇಟ್ಟಿದ್ದರು. ಆದರೆ ಅದು ವಿಶಾಖಾಪಟ್ಟಣಂನ ದಂಡೆಯಲ್ಲಿಯೇ ಇದೆ ಎಂದು ಅನಿಸುವಂತೆ ಮಾಡಿದ್ದರು. `ವಿಕ್ರಾಂತ’ವನ್ನು ಹುಡುಕುತ್ತ ಗಾಝಿ ವಿಶಾಖಾಪಟ್ಟಣಂನ ದಂಡೆಗೆ ಬರಬೇಕು, ಎಂಬುದೇ ಅದರ ಹಿಂದಿನ ಉದ್ದೇಶವಾಗಿತ್ತು. ಅವರ ಈ ರಣತಂತ್ರ ಯಶಸ್ವಿಯಾಯಿತು. ಗಾಝಿ ವಿಶಾಖಾಪಟ್ಟಣಂನ ದಂಡೆಗೆ ಬರುವಷ್ಟರಲ್ಲಿ ಮೊದಲೇ ನಿರ್ಮಿಸಿದ್ದ ಭೂಸುರಂಗವನ್ನು ಕೃಷ್ಣನ್ ನಾಶಗೊಳಿಸಿದರು. ಗಾಝಿ ಅತಂತ್ರ ಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿತು.
ನೀಲಕಂಠ ಕೃಷ್ಣನ್ ಅವರು ಭಾರತದ ಪ್ರುಮುಖ ನೌಕಾಧಿಪತಿಯಗಿದ್ದು ರಣತಂತ್ರ ಹೆಣೆಯುವಲ್ಲಿ ಸಿದ್ಧಹಸ್ತರಾಗಿದ್ದರು.

By suddi9

Leave a Reply

Your email address will not be published. Required fields are marked *