ಪೊಳಲಿ ಯಕ್ಷೋತ್ಸವ 2025 ಆಮಂತ್ರಣ ಪತ್ರಿಕೆ ಬಿಡುಗಡೆ
ಪೊಳಲಿ: ಯಕ್ಷಕಲಾ ಪೊಳಲಿ ಇದರ ತ್ರಿಂಶತ್ ಉತ್ಸವ ದ ಅಂಗವಾಗಿ ಜರಗುವ ಪೊಳಲಿ ಯಕ್ಷೋತ್ಸವ 2025 ಇದರ ಆಮಂತ್ರಣ ಪತ್ರಿಕೆಯು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಆ. 18 ರಂದು ಸೋಮವಾರ ಬಿಡುಗಡೆ ಗೊಂಡಿತು.

ಪ್ರಶಸ್ತಿ ಪ್ರಧಾನ -ಗೌರವಾರ್ಪಣೆ -ಸನ್ಮಾನ- ಸಂಸ್ಮ್ರಣೆ -ಬಯಲಾಟ
ಪೊಳಲಿ ಯಕ್ಷೋತ್ಸವ 2025 ಸೆ. 27ರಂದು ಶನಿವಾರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಾಜಾಂಗಣದಲ್ಲಿ ಬಡಗು ಯಕ್ಷಗಾನ ಬಯಾಲಾಟ “ಮಧುರಾ ಮಹೀಂದ್ರ” ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಪೌರಾಣಿಕ ಯಕ್ಷಗಾನ ಬಯಲಾಟ “ಧಮಯಂತಿ ಪುನಃ ಸ್ವಯಂವರ” “ಜ್ವಾಲಾ ಪ್ರತಾಪ- ವೀರ ಬಬ್ರು ವಾಹನ”

ಪೊಳಲಿ ಶ್ರೀ ಕ್ಷೇತ್ರದ ಅರ್ಚಕ ದೋಟ ಪರಮೇಶ್ವರ ಭಟ್ ರವರು ಪ್ರಾರ್ಥನೆ ಮಾಡಿ ಶುಭ ಹಾರೈಸಿದರು ಶ್ರೀರಾಮಕೃಷ್ಣ ತಪೋವನ ಪೊಳಲಿಯ ಶ್ರೀ ವಿವೇಕ ಚೈತನ್ಯಾನ0ದ ಸ್ವಾಮೀಜಿ ಯವರಿಗೆ ಮೊದಲ ಆಮಾಂತ್ರಣ ನೀಡಿ ಕಾರ್ಯಕ್ರಮ . ಗೌರವಪೂರ್ವಕವಾಗಿ ಆಮಂತ್ರಿಸಲಾಯಿತು. ಪೂಜ್ಯ ಗುರುಗಳು ಪ್ರಸಾದ ಕಾಣಿಕೆ ನೀಡಿ ಶುಭ ಹಾರೈಸಿದರು. ಆತ್ಮೀಯವಾಗಿ ಸ್ವಾಗತಿಸುವ ಸಂಘಟಕರು ಯಕ್ಷಕಲಾ ಪೊಳಲಿ



