ಅಡ್ಡೂರು ಬೆನಕ ಮಂಟಪದ ನೂತನ ಕಾರ್ಯಾಲಯ ಉದ್ಘಾಟನೆ
ಪೊಳಲಿ:ಅಡ್ಡೂರು 39 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಬೆನಕ ಮಂಟಪದ ನೂತನ ಕಾರ್ಯಾಲಯದ ಕಟ್ಟಡ ಆ.17 ರಂದು ಭಾನುವಾರ ಉದ್ಘಾಟನೆಗೊಂಡಿತು.

ಅಡ್ಡೂರು ಬೆನಕ ಮಂಟಪದ ಕಾರ್ಯಾಲಯವನ್ನು ಗಂದಾಡಿ ಧನಂಜಯ ಭಟ್ ಸಂಪೂರ್ಣವೆಚ್ಚವನ್ನು ಭರಿಸಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗೆ ಹಸ್ತಾಂತರ ಮಾಡಿದರು.

ಕಾರ್ಯಾಲಯದ ಉದ್ಘಾಟನೆಯನ್ನು ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್ಚಂದ್ರ ಅಮೀನ್ ಬರ್ಕೆ ನೆರವೇರಿಸಿದರು.ಗಣಹೋಮ, ಗಣಪತಿಪೂಜೆ, ಪೂಜಾ ವಿಧಿವಿಧಾನಗಳನ್ನು ಶ್ರೀ ಮುಖ್ಯಪ್ರಾಣ ದೇವಸ್ಥಾನದ ಅರ್ಚಕ ಚಂದ್ರಶೇಖರ ಭಟ್ ನಡುಮನೆ ನೆರವೇರಿಸಿದರು.

ಶ್ರೀ ಸಾರ್ವಜನಿಕ ಸೇವಾ ಸಮಿತಿ ಅಧ್ಯಕ್ಷರಾದ ಯಶೋಧರ ಅಡ್ಡೂರು, ಅಮಿತಾ ಯಶೋಧರ ಅಡ್ಡೂರು ಗೌರವ , ಸಂಯೋಜಕರು ಧನಂಜಯ ಭಟ್ ಗಂದಾಡಿ ಗೌರವ ಸಲಹೆಗಾರರಾದ ನೂಯಿ ಬಾಲಕೃಷ್ಣ ರಾವ್, ಗೌರವಾಧ್ಯಕ್ಷ ಲೋಕನಾಥ ಪೊನ್ನೆಲ, ಪ್ರಧಾನ ಕಾರ್ಯದರ್ಶಿ ನವೀನ್ ಆಚಾರ್ ಅಡ್ಡೂರು, ಉಪಾಧ್ಯಕ್ಷರಾದ ಸದಾಶಿವ ಬಾರ್ ಲಚ್ಚಿಲ್, ನಾಗೇಶ್ ರಾಯರಬೆಟ್ಟು, ದಿವಾಕರ ಅಡ್ಡೂರು, ಜೊತೆ ಕಾರ್ಯದಶಿಗಳಾದ ಚಂದ್ರಹಾಸ ರಾಯರಬೆಟ್ಟು, ಶೇಖರ ಕೋಡಿಬೆಟ್ಟು, ಆನಂದ ರಾಯರಬೆಟ್ಟು,ಕೋಶಾಧಿಕಾರಿ, ಕಿರಣ್ ಶೆಟ್ಟಿ ಕೋಡಿಬೆಟ್ಟು, ಯಾದವ ಕೋಡಿಬೆಟ್ಟು, ನವೀನ್ ಅಮೀನ್‌ಪೊನ್ನೆಲ, ದುರ್ಗಾಪ್ರಸಾದ್‌ನೂಯಿ, ಕಮಲ್ ಪೂಜಾರಿ ನೂಯಿ ,ಪ್ರವೀಣ್ ಕುಮಾರ್ ಅಮ್ಮುಂಜೆ, ಅಕ್ಷಯ್ ಪೊಳಲಿ, ಸುಳ್ಯಗುತ್ತು ಸುಬ್ಬಯ್ಯ ಭಂಡಾರಿ,ಯಶವಂತ ಪೂಜಾರಿ ಪೊಳಲಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು, ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.




