ಪೊಳಲಿ: ಕರಿಯಂಗಳ ಗ್ರಾಮ ಪಂಚಾಯತ್‌ ಮತ್ತು ಮಾನಸ ಸಂಜೀವಿನಿ ಒಕ್ಕೂಟ ಇದರ ಜಂಟಿ ಆಶ್ರಯದಲ್ಲಿ ಪಂಚಾಯತ್‌ನ ಎನ್.ಆರ್.ಎಲ್.ಎಮ್ ಸಭಾಂಗಣದಲ್ಲಿ “ಆಟಿದ ಗಮ್ಮತ್ ” ಕಾರ್ಯಕ್ರಮವು ಬುಧವಾರ ನಡೆಯಿತು.

ಕರಿಯಂಗಳ ‌ಗ್ರಾಮ ಪಂಚಾಯತ್‌ ಸಿಬ್ಬಂದಿಗಳು ಹಾಗೂಎನ್.ಆರ್.ಎಲ್.ಎಮ್ ಮತ್ತು ಮಾನಸ ಸಂಜೀವಿನಿ ಒಕ್ಕೂಟ ಇದರ ಸದಸ್ಯರುಗಳು ವಿವಿಧ ಆಟೋಟ ಸ್ಪರ್ಧೆಗಳು ಮತ್ತು ಮನೋರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರಿಮತಿ ರಾಧಾ ಲೋಕೇಶ್‌ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಭಾಗವಹಿಸಿದ್ದರು.

ಬಿ.ಕೆ ತಾಂತ್ರಿಕ ಅಭಿಯಂತರರು ನರೇಗಾ ಪ್ರದೀಪ್, ಸುಶಾನ್. ಗ್ರಾಮ ಆಡಳಿತ ಅಧಿಕಾರಿ, ಸುವಾಸಿನಿ ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಮಾಲಿನಿ.ಬಿ.ವಿ, ಗುತ್ತಿಗೆದಾರ ಕೆ.ಎಂ ಅಬೂಬಕ್ಕರ್, ಮಾನಸ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪೂರ್ಣಿಮಾ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತಿ , ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಭಾರತಿ , ಗ್ರಾಮ ಪಂಚಾಯತ್ ನ ಸರ್ವ ಸದಸ್ಯರು, ಸಂಜೀವಿನಿ ಒಕ್ಕೂಟದ ಸರ್ವ ಸದಸ್ಯರು, ಸಿಬ್ಬಂದಿ ವರ್ಗ ದವರು, ಗ್ರಾಮಸ್ಥರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *