ಬಂಟ್ವಾಳ: ಸಜೀಪಮೂಡ ನಗ್ರಿಗುತ್ತು ನಿವಾಸಿ, ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯಶಿಕ್ಷಕ ನಗ್ರಿಗುತ್ತು ವಿಠಲ ಶೆಟ್ಟಿ (74) ಡಿ. 11ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಅವರು ಗ್ರಾ.ಪಂ. ಸದಸ್ಯರಾಗಿ, ಸಜೀಪ ಮಾಗಣೆ ಗುರಿಕಾರರಾಗಿ, ಪ್ರಗತಿಪರ ಕೃಷಿಕರಾಗಿ, ಸಾಮಾಜಿಕ ಸೇವಾ ಕರ್ತರಾಗಿ ತನ್ನ ಸೇವಾ ನಿವೃತ್ತಿಯ ಬಳಿಕ ತೊಡಗಿಸಿಕೊಂಡಿದ್ದರು.

KAR_7189
ಮೃತರು ಪತ್ನಿ, ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ, ಮುಂಬೈ ಉದ್ಯಮಿ ವಿವೇಕ್ ಶೆಟ್ಟಿ ನಗ್ರಿಗುತ್ತು , ಶಿಕ್ಷಕ ವಿನಯ ಶೆಟ್ಟಿ , ಇಂಜಿನಿಯರ್ ಮುಂಬೈ ಉದ್ಯಮಿ ಹರಿಪ್ರಸಾದ್ ಶೆಟ್ಟಿ ಸಹಿತ ಮೂವರು ಪುತ್ರರನ್ನು ಅಗಲಿದ್ದಾರೆ.
ಜಿ.ಪಂ.ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜರ ನಿಕಟ ಸಂಬಂಕರಾಗಿದ್ದು ನಾಡಿನ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಸೇವಾಕರ್ತರಾಗಿದ್ದರು. ನಗ್ರಿ ಶ್ರೀ ಶಾರದಾ ಭಜನಾ ಮಂದಿರ ಜೀರ್ಣೋದ್ಧಾರ ಸಮಿತಿ ಗೌರವ ಅಧ್ಯಕ್ಷರು.ಅವರ ಸೇವಾ ಅವದಿಯಲ್ಲಿ ಆದರ್ಶ ಶಿಕ್ಷಕ ಪುರಸ್ಕಾರಕ್ಕಾಗಿ ಸಜೀಪಮೂಡ ಶ್ರೀ ಶಾರದಾ ಭಜನಾ ಮಂದಿರದಿಂದ ಸಮ್ಮಾನಿತರಾಗಿದ್ದರು.

By Suddi9

Leave a Reply

Your email address will not be published. Required fields are marked *