ಪೊಳಲಿ:ಶ್ರೀ ಕ್ಷೇತ್ರ ಪೊಳಲಿಯಲ್ಲಿ ಕೆ.ಶಂಕರ ರಾವ್ ಅಡ್ವೋಕೇಟ್ ಬೆಂಗಳೂರು ಅವರ 90ರ ಸಂಭ್ರಮದಲ್ಲಿ ಸೋಮವಾರ ಚಂಡಿಕಾಹೋಮ ನಡೆಯಿತು.

ಹುಟ್ಟುಹಬ್ಬವನ್ನು ತನ್ನ ಕುಟುಂಬಿಕರೊಂದಿಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಚಂಡಿಕಾಹೋಮವನ್ನು ದೇವಳದ ಪ್ರಧಾನ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಅರ್ಚಕರಾದ ಪದ್ಮನಾಭ ಭಟ್, ಅನಂತ ಭಟ್, ಶ್ರೀ ಮಾಧವ ಭಟ್ ಪರ್ಧಖಂಡ, ಶ್ರೀ ಆದರ್ಶ ಭಟ್, ಚಂದ್ರಶೇಖರ ಭಟ್ ನಡುಮನೆ, ಸಹ ಅರ್ಚಕರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಕೆ. ಶಂಕರ ರಾವ್ ಅವರ ಧರ್ಮಪತ್ನಿ ಶ್ರೀಮತಿ ಜಯಲಕ್ಷ್ಮೀ ಹಾಗೂ ಮಕ್ಕಳೊಂದಿಗೆ 90 ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ಚಂಡಿಕಾಹೋಮ ನೆರವೇರಿಸಿ ಸಂಭ್ರಮಾಚರಣೆಯನ್ನು ಅಚರಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಮಾಧವ ಭಟ್, ನಾರಾಯಣ ಭಟ್ , ಶಿವರಾಮ್ ಭಟ್, ಶ್ರೀಮತಿ ಜಯಲಕ್ಷ್ಮೀ ಶಂಕರ್ ಭಟ್, ಶ್ರೀಮತಿ ಉಮಾ ಉಡುಪ,ಉಮೇಶ್ ಭಟ್, ಶ್ರೀಮತಿ ಪ್ರಭಾ ನಾರಾಯಣ ಉಪಾಧ್ಯಾಯ, ಮುಂತಾದವರು ಪೂಜೆಯಲ್ಲಿ ಭಾಗವಹಿಸಿ ಶುಭ ಹಾರೈಸಿದರು.
