ಬಂಟ್ವಾಳ: ಶಕ್ತಿ ವಿದ್ಯಾಸಂಸ್ಥೆ, ಮಂಗಳೂರು ಇದರ ಸಹಾಯೋಗದೊಂದಿಗೆ ವಿದ್ಯಾಭಾರತಿ ದಕ್ಷಿಣ ಕನ್ನಡ  ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ 14ರ ವಯೋಮಾನದ ಬಾಲಕಿರ ವಿಭಾಗದಲ್ಲಿ ಕಲ್ಲಡ್ಕ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ಅನನ್ಯ ಎ ಆರ್ ಇವರು ಭಾಗವಹಿಸಿ 200 ಮೀಟರ್ ಬಟರ್ಫ್ಲೈ ಮತ್ತು 100 ಮೀಟರ್ ಫ್ರೀ ಸ್ಟೈಲಲ್ಲಿ ಚಿನ್ನದ ಪದಕ ಗಳನ್ನು 100 ಮೀಟರ್  ಬ್ಯಾಕ್ ಸ್ಟ್ರೋಕ್ ನಲ್ಲಿ ಬೆಳ್ಳಿಯ ಪದಕ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ,

ಇವರು ರೇಷ್ಮೆ ಇಲಾಖೆಯ ನಿವೃತ್ತ ಇನ್ಸ್ ಪೆಕ್ಟರ್ ಬಿ.ಕೆ ನಾಯಕ್ ಇವರ ಶಿಷ್ಯರಾಗಿದ್ದು ಮಂಗಳೂರಿನ ಸೈಂಟ್ ಅಲೋಸಿಸ್ ಈಜುಕೊಳದ ಮುಖ್ಯ ತರಬೇತುದಾರರಾದ ಲೋಕರಾಜ್ ವಿಟ್ಲ ಮತ್ತು ವಿನೋದ್ ಕಾರವಾರ ಇವರಿಂದ ತರಬೇತಿ ಪಡೆಯುತ್ತಿದ್ದಾರೆ

By Suddi9

Leave a Reply

Your email address will not be published. Required fields are marked *