ಬಂಟ್ವಾಳ: ಶಕ್ತಿ ವಿದ್ಯಾಸಂಸ್ಥೆ, ಮಂಗಳೂರು ಇದರ ಸಹಾಯೋಗದೊಂದಿಗೆ ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ 17ರ ವಯೋಮಾನದ ಬಾಲಕಿರ ವಿಭಾಗದಲ್ಲಿ ಕಲ್ಲಡ್ಕ ಶ್ರೀ ರಾಮ ಪ್ರೌಢ ಶಾಲೆಯ 10ನೇ ತರಗತಿಯ ಅನರ್ಘ್ಯ ಎ.ಆರ್ ಇವರು ಭಾಗವಹಿಸಿ 200 ಮೀಟರ್ ಬ್ಯಾಕ್ ಸ್ಟ್ರೋಕ್ ನಲ್ಲಿ 200 ಮೀ ಮತ್ತು 400 ಮೀ ಇಂಡಿವಿಜುಲ್ ಮೆಡ್ಲೆಗಳಲ್ಲಿ ಚಿನ್ನದಪದಕ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಇವರು ರೇಷ್ಮೆ ಇಲಾಖೆಯ ನಿವೃತ್ತ ಇನ್ಸ್ ಪೆಕ್ಟರ್ ಬಿ.ಕೆ ನಾಯಕ್ ಇವರ ಶಿಷ್ಯರಾಗಿದ್ದು ಮಂಗಳೂರಿನ ಸೈಂಟ್ ಅಲೋಸಿಸ್ ಈಜುಕೊಳದ ಮುಖ್ಯ ತರಬೇತುದಾರರಾದ ಲೋಕರಾಜ್ ವಿಟ್ಲ ಮತ್ತು ವಿನೋದ್ ಕಾರವಾರ ಇವರಿಂದ ತರಬೇತಿ ಪಡೆಯುತ್ತಿದ್ದಾರೆ
