ಪೊಳಲಿ: ಕೆಸರ್ ಡೊಂಜಿ ದಿನ ಕೆಸರ್ ಗದ್ದೆ ಕ್ರೀಡಾಕೂಟ ಯಕ್ಷಕಲಾ ಸಂಘ (ರಿ) ಯಕ್ಷಧಾಮ ವರಕೋಡಿ ಇದರ ಆಶ್ರಯದಲ್ಲಿ ಆ.10 ರಂದು ಭಾನುವಾರ ವರಕೋಡಿ ಬಾಕಿಮಾರ್ ಗದ್ದೆಯಲ್ಲಿ ಬೆಳಿಗ್ಗೆ 9.ಗಂಟೆಗೆ ಕೆಸರ್‌ಡೊಂಜಿ ದಿನ
ಕೆಸರ್ ಗದ್ದೆ ಕ್ರೀಡಾಕೂಟ ನಡೆಯಲಿದೆ.


ಕ್ರೀಡಾಕೂಟದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕರು ರಮೇಶ್ಚಂದ್ರ ಭಂಡಾರಿ ಪರಕೂರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಯಕ್ಷಗಾನ ನಾಟ್ಯ ಗುರುಗಳು ಶಿಕ್ಷಕ ದೇವದಾಸ್ ಅರ್ಕುಳ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಡಗಬೆಳ್ಳೂರು ಶಾಲಾ ಮುಖ್ಯ ಶಿಕ್ಷಕ ಕೇಶವ ನಾÊಕ್, ಮಂಜುನಾಥ ದುಬೈಸಮಾಜ ಸೇವಕರು ,ಕಲಾವರ್ಧಕ ಯುವಕ ಸಂಘ ನಾರಳ ಸಂಕೇಶ ಅಧ್ಯಕ್ಷ ಅನ್ವಿತ್ ಸಾಮನಿ ಮಳಲಿ , ಲೋಕೇಶ್ ಪಲ್ಲಿಪಾಡಿ ಮಾಲಕರು ರಾಜು ಸ್ವೀಟ್ಸ್ ಪಲ್ಲಿಪಾಡಿ,ರಾಮದಾಸ್ ಕಮ್ಮಾಜೆ ನಾಗಶ್ರೀ ಮಿತೃವೃಂದ ಚಾರಿಟೇಬಲ್ ಟ್ರಸ್ಟ್ (ರಿ)ಕಮ್ಮಾಜೆ, ಯಕ್ಷ ಕಲಾ ಸಂAಘದ ಅಧ್ಯಕ್ಷ ರಾಜ್ ಕಿರಣ್ , ಕ್ರೀಡಾಕಾರ್ಯದರ್ಶಿಪುತ್ತುಬಾವ ವರಕೋಡಿ ಭಾಗವಹಿಸಲಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಕಂಬಳ ಕ್ಷೇತ್ರದ ಸಾಧಕ ಗುಣಪಾಲಶೆಟ್ಟಿ ಪಲ್ಲಿಪಾಡಿ, ವಿಜಯ ಸೌಮ್ಯ ಬೆಂಜನಪದವು,ಕೆ.ಎಂ.ಎಫ್ ನಿರ್ದೇಶಕ ನಂದರಾಮ ರೈ ಅಂಬೋಡಿಮಾರ್, ಬಡಗಬೆಳ್ಳೂರು ಗ್ರಾಮ ಪಂ. ಉಪಾಧ್ಯಕ್ಷ ಚಂದ್ರಹಾಸ ಅಜಿನಡ್ಕ, ವಕೀಲೆ ಶ್ರೀಮತಿ ತೀರ್ಥ ಸೀತಾರಾಮ ಕಮ್ಮಾಜೆ, ಕುಶಕುಮಾರ್ ಸಾಣಕಟ್ಟ ಶಿವ ಇಲೆಕ್ಟ್ರಿಕಲ್ಸ್‌ ಮಾಲಕರು, ಉಧ್ಯಮಿ ಸತೀಶ್ ಬೆಳ್ಳೂರು ಬೆಟ್ಟು, ವೀರ ಯೋಧ ಯಾಧವ ಫ್ರೆಂಡ್ಸ್ ಅಮ್ಮುಂಜೆ ಅಧ್ಯಕ್ಷರು ಉದಯ ಕುಮಾರ್ ಅಮ್ಮುಂಜೆ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.

By suddi9

Leave a Reply

Your email address will not be published. Required fields are marked *