ಪೊಳಲಿ: ಧರ್ಮಜ್ಯೋತಿ ಫ್ರೆಂಡ್ಸ್ ಸರ್ಕಲ್ ಟ್ರಸ್ಟ್ (ರಿ) ಕಲ್ಕುಟ ಇವರ ವತಿಯಿಂದ 14 ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜಾ ವೃತವು ಶುಕ್ರವಾರ ಪೊಳಲಿ ರಾಮಕೃಷ್ಣ ತಪೋವನದಲ್ಲಿದಲ್ಲಿ ನಡೆಯಿತು.

ಬೆಳಗ್ಗೆ 10.30 ಕ್ಕೆ ರಾಮಕೃಷ್ಣ ತಪೋವನದ ಸಹಕಾರದೊಂದಿಗೆ ವರಮಹಾಲಕ್ಷ್ಮೀ ಪೂಜಾ ವೃತದ ಮಹತ್ವವನ್ನು ಜ್ಯೋತಿಷ್ಯ ವಿದ್ವಾನ್ ರಾಜಶೇಖರ ರಾವ್ ನೂಯಿ ತಿಳಿಸಿದರು.

ವರಮಹಾಲಕ್ಷ್ಮೀ ಪೂಜೆಯ ಸಂದರ್ಭದಲ್ಲಿ ರಕ್ಷಾಬಂಧನ ಉತ್ಸವ ಜರಗಿತು. ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕಚೈತನ್ಯಾನಂದ ,ಪೊಳಲಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅದ್ಯಕ್ಷ ವೆಂಕಟೇಶ್ ನಾವಡ ಪೊಳಲಿ ಹಾಗೂ ವರಮಹಾಲಕ್ಷ್ಮೀ ಪೂಜಾ ವೃತದ ಭಕ್ತಾಧಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಧರ್ಮಜ್ಯೋತಿ ಫ್ರೆಂಡ್ಸ್ ಸರ್ಕಲ್ ಟ್ರಸ್ಟ್ ಇದರ ಅಧ್ಯಕ್ಷ ಸೂರಜ್ ಕಲ್ಕುಟ ಹಾಗೂ ಪದಾಧಿಕಾರಿಗಳು ಹಾಗೂ ಅಪಾರ ಮಂದಿ ಮಹಿಳಾ ಭಕ್ತರು ಪೂಜೆಯಲ್ಲಿ ಸೇರಿದ್ದರು.


