ಬಂಟ್ವಾಳ: ವಕೀಲರ ಸಂಘ (ರಿ)ಬಂಟ್ವಾಳಇದರ ವತಿಯಿಂದ ಕಾನೂನು ಮಾಹಿತಿ ಕಾರ್ಯಗಾರ ಮತ್ತು ಸೇವಾ ನಿವೃತ್ತಿ ಹೊಂದುತ್ತಿರುವ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ಬಂಟ್ವಾಳ ನ್ಯಾಯಾಲಯದ ಶಿರಸ್ತೇದಾರರಾದ  ಕೆ.ಬಾಲಕೃಷ್ಣ ಬೀಳ್ಕೊಡುಗೆಕಾರ್ಯಕ್ರಮವಕೀಲರ ಸಂಘದ ಕಚೇರಿ ಸಭಾಭವನದಲ್ಲಿ ನಡೆಯಿತು.


  ಹಿರಿಯ ಸಿವಿಲ್  ಮತ್ತು ಜೆ.ಎಂ.ಎಫ್.ಸಿ ಬಂಟ್ವಾಳದ ನ್ಯಾಯಧೀಶರಾದ ಅನಿಲ್ ಪ್ರಕಾಶ್ ಎಂ.ಪಿ ಅವರು ಕಾರ್ಯಗಾರವನ್ನು ಉದ್ಘಾಟಿಸಿ, ಮಾತನಾಡಿ, ಯುವ ವಕೀಲರು ಇಂತಹ ಮಾಹಿತಿ ಕಾರ್ಯಾಗಾರಗಳಲ್ಲಿ ಹೆಚ್ಚು ಭಾಗವಹಿಸಿ ಇದರ ಸದುಪಯೋಗಪಡೆದುಕೊಂಡು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳ ಬೇಕು ಎಂದರು.


ಅತಿಥಿಯಾಗಿದ್ದ ಪ್ರಧಾನ ಸಿವಿಲ್  ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಲಯದ ನ್ಯಾಯಾಧೀಶರಾದ ಕೃಷ್ಣಮೂರ್ತಿ ಎನ್ ಅವರು ಮಾತನಾಡಿ,ಈಚೆಗೆ ನಡೆದ  ಲೋಕಾಅದಾಲತ್ ಮೂಲಕ ಹಲವಾರು ಪ್ರಕರಣಗಳು ಇತ್ಯರ್ಥಕ್ಕೆ ಸಹಕಾರಿಯಾಗಿರುವುದಕ್ಕೆ ಅಭಿನಂದಿಸಿದರಲ್ಲದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಕರಣಗಳ ಶೀಘ್ರ ಇತ್ಯರ್ಥವಾಗುವ ನಿಟ್ಟಿನಲ್ಲಿ ಸಹಕಾರವನ್ನು ಬಯಸಿದರು.


ಹೆಚ್ಚುವರಿ ಸಿವಿಲ್  ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಧೀಶರಾದರಾಜೇಂದ್ರ ಪ್ರಸಾದ್ ಕೆ.ಎಸ್ ಅವರು ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ರಿಚಾರ್ಡ್ ಕೋಸ್ತ.ಎಂ ಅವರು ಮಾತನಾಡಿ, ನಿವೃತ್ತಿಯಾಗುತ್ತಿರುವ ಶಿರಸ್ತೇದಾರರಾದ ಬಾಲಕೃಷ್ಣ ಅವರು ಬಂಟ್ವಾಳ ನ್ಯಾಯಾಲಯಕ್ಕೆ ಅಪಾರವಾದ ಸೇವೆ ನೀಡಿದ್ದಾರೆ ಎಂದು ಸ್ಮರಿಸಿದರು.ಇದೇ ವೇಳೆ  ಶಿರಸ್ತೇದಾರ ಕೆ.ಬಾಲಕೃಷ್ಣ ಅವರನ್ನು ಗೌರವಿಸಲಾಯಿತು.


ಬಳಿಕ”ನ್ಯಾಯಾಲಯದಲ್ಲಿ ದಾವೆ, ಪ್ರಕರಣಗಳನ್ನು ದಾಖಲಿಸುವ ಬಗ್ಗೆ ಪಾಲಿಸಬೇಕಾದ ನಿಯಮಗಳು ಮತ್ತು ದಾವಾ ಶುಲ್ಕಗಳ ಪಾವತಿ ಬಗ್ಗೆ  ಸಂಪನ್ಮೂಲ ವ್ಯಕ್ತಿಯಾಗಿದ್ದ ಬಂಟ್ವಾಳ ನ್ಯಾಯಾಲಯದ ಹಿರಿಯ ಶಿರಸ್ತೇದಾರರಾದ ಪ್ರಕಾಶ್ ನಾಯಕ್ ಮಾಹಿತಿ ನೀಡಿದರು.


  ವಕೀಲರ ಸಂಘದ  ಪ್ರಧಾನ ಕಾರ್ಯದರ್ಶಿ ನರೇಂದ್ರನಾಥ ಭಂಡಾರಿ ಸ್ವಾಗತಿಸಿದರು, ಜೊತೆ ಕಾರ್ಯದರ್ಶಿ ಅಕ್ಷತಾ ಶೆಟ್ಟಿ  ವಂದಿಸಿದರು. ನ್ಯಾಯವಾದಿ ಸ್ವರ್ಣಗೌರಿ ಕಾರ್ಯಕ್ರಮ ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *